See also 2hide  3hide  4hide  5hide
1hide ಹೈಡ್‍
ಕ್ರಿಯಾಪದ
(ಭೂತರೂಪ hid, ಭೂತಕೃದಂತ hidden ಉಚ್ಚಾರಣೆ ಹಿಡ್‍(ಡ)ನ್‍
ಸಕರ್ಮಕ ಕ್ರಿಯಾಪದ
  1. ಮುಚ್ಚಿಡು; ಬಚ್ಚಿಡು; ಬೈತಿಡು; ಮರೆಮಾಡು: hid it under the cushion ಅದನ್ನು ಮೆತ್ತೆಯಡಿಯಲ್ಲಿ ಮುಚ್ಚಿಟ್ಟhid her in the cupboard ಅವಳನ್ನು ಅಲಮಾರುವಿನಲ್ಲಿ ಬೈತಿಟ್ಟ.
  2. (ವಸ್ತುವನ್ನು ಉದ್ದೇಶಪೂರ್ವಕವಾಗಿ ಯಾ ಉದ್ದೇಶವಿಲ್ಲದೆ) ಕಣ್ಣಿಗೆ ಬೀಳದಂತಿಡು; ಮುಚ್ಚು; ಅಗೋಚರವಾಗಿಡು: trees hid the house ಮರಗಳು ಮನೆಯನ್ನು ಮುಚ್ಚಿದವು.
  3. (ಸತ್ಯಾಂಶವನ್ನು, ಸಂಗತಿಯನ್ನು) ಗುಟ್ಟಾಗಿಡು; ಮರೆಮಾಚು; ರಹಸ್ಯವಾಗಿಡು: hid his real motive from her ಅವಳ ಹತ್ತಿರ ತನ್ನ ನಿಜವಾದ ಉದ್ದೇಶವನ್ನು ಗುಟ್ಟಾಗಿಟ್ಟನು.
ಅಕರ್ಮಕ ಕ್ರಿಯಾಪದ

ಬಚ್ಚಿಟ್ಟುಕೊ; ಮರೆಸಿಕೊ; ಅವಿತುಕೊ: he hid in the bushes ಅವನು ಪೊದೆಗಳಲ್ಲಿ ಅವಿತುಕೊಂಡ, ಬಚ್ಚಿಟ್ಟುಕೊಂಡ.

ಪದಗುಚ್ಛ

hide out (or up) ಅಡಗಿಕೊಂಡಿರು; ಅವಿತುಕೊಂಡಿರು; ಮರೆಯಲ್ಲಿರು; ಬಚ್ಚಿಟ್ಟುಕೊಂಡಿರು; ಕಣ್ಣಿಗೆ ಬೀಳದಿರು.

ನುಡಿಗಟ್ಟು
  1. hide one’s head (ಅವಮಾನ, ಭಯ, ಮೊದಲಾದವುಗಳಿಂದ) ತಲೆಮರೆಸಿಕೊ; ಬಚ್ಚಿಟ್ಟುಕೊ; ಕಣ್ಣಿಗೆ ಬೀಳದಿರು.
  2. hide one’s light under a bushel (ಸಂಕೋಚದಿಂದ, ಲಜ್ಜೆಯಿಂದ) ತನ್ನ ಗುಣಸಾಮರ್ಥ್ಯಗಳನ್ನು – ಬಚ್ಚಿಡು, ಪ್ರಕಟಗೊಳಿಸದಿರು, ಪ್ರಚಾರಗೊಳಿಸದಿರು.
See also 1hide  3hide  4hide  5hide
2hide ಹೈಡ್‍
ನಾಮವಾಚಕ

(ಕಾಡುಮೃಗಗಳ ವೀಕ್ಷಣದಲ್ಲಿ ಬಳಸುವ) ಮರೆ; ಮರಸು; ಅವಿತುಕೊಳ್ಳುವ, ಬಚ್ಚಿಟ್ಟುಕೊಳ್ಳುವ ಜಾಗ.

See also 1hide  2hide  4hide  5hide
3hide ಹೈಡ್‍
ನಾಮವಾಚಕ
  1. ಪ್ರಾಣಿಯ ಕಚ್ಚಾ ಚಕ್ಕಳ ಯಾ ಹದ ಮಾಡಿದ ತೊಗಲು.
  2. (ಆಡುಮಾತು) ಮನುಷ್ಯನ ಚರ್ಮ: saved his own hide ತನ್ನ ಜೀವ ಉಳಿಸಿಕೊಂಡI’ll tan your hide ನಾನು ನಿನ್ನ ಚರ್ಮ ಸುಲಿಯುತ್ತೇನೆ.
See also 1hide  2hide  3hide  5hide
4hide ಹೈಡ್‍
ಸಕರ್ಮಕ ಕ್ರಿಯಾಪದ

(ಆಡುಮಾತು) ಕೋರಡೆಯಿಂದ, ಚಾಟಿಯಿಂದ – ಬಡಿ, ಬಾರಿಸು, ಹೊಡೆ.

See also 1hide  2hide  3hide  4hide
5hide ಹೈಡ್‍
ನಾಮವಾಚಕ

ಹೈಡ್‍; ಆಶ್ರಿತರೂ ಸೇರಿ ಒಂದು ಸ್ವತಂತ್ರ ಕುಟುಂಬದ ಜೀವನಕ್ಕೆ ಸಾಕಾಗುವಷ್ಟು ಜಈನಿನ ಒಂದು ಹಿಂದಿನ ಅಳತೆ, ಸಾಮಾನ್ಯವಾಗಿ 60 ರಿಂದ 120 ಎಕರೆಗಳು.