herself ಹರ್‍ಸೆಲ್‍
ಸರ್ವನಾಮ
  1. (she ಯಾ her ಅವಳ ಎಂಬುದನ್ನು ಒತ್ತಿ ಹೇಳುವ ರೂಪ) ಅವಳೇ; ಆಕೆಯೇ: she herself told me ಅವಳೇ ನನಗೆ ಹೇಳಿದಳುshe said it herself ಅದನ್ನು ಆಕೆಯೇ ಹೇಳಿದ್ದುshe herself will do it ಅವಳೇ ಅದನ್ನು ಮಾಡುತ್ತಾಳೆ.
  2. (her ಎಂಬುದರ ಆತ್ಮಾರ್ಥಕ ರೂಪ) ಅವಳನ್ನೇ: she hurt herself ಅವಳು ತನ್ನನ್ನೇ ಗಾಯಗೊಳಿಸಿಕೊಂಡಿದ್ದಾಳೆask the woman herself ಆ ಹೆಂಗಸನ್ನೇ ಕೇಳುlet her do it herself ಅವಳೇ ಅದನ್ನು ಮಾಡಲಿ.
  3. (ಆಕೆಯ) ಸ್ವಸ್ಥಿತಿಯಲ್ಲಿ; ಎಂದಿನ, ಸಹಜ, ಮಾಮೂಲಿ — ಸ್ಥಿತಿಯಲ್ಲಿ: she is now herself again ಈಗ ಆಕೆ ಮತ್ತೆ ಸ್ವಸ್ಥಿತಿಯಲ್ಲಿದ್ದಾಳೆdoes not feel quite herself today ಇಂದು ಅವಳು ತನ್ನ ಮಾಮೂಲಿನ ಸ್ಥಿತಿಯಲ್ಲಿಲ್ಲ.
  4. (ಉಪಸರ್ಗಕ್ಕೆ ಯಾ ಕ್ರಿಯಾಪದಕ್ಕೆ ಕರ್ಮಪದವಾಗಿ) ಅವಳಿಗೆ ಯಾ ಅವಳನ್ನು: much inclined to talk to herself ತನಗೇ, ತನ್ನಷ್ಟಕ್ಕೆ, ತನ್ನೊಂದಿಗೇ ಮಾತನಾಡಿಕೊಳ್ಳುವ ಪ್ರತ್ತಿ ಬಹಳವಾಗಿರುವmade her forget herself ಅವಳು ತನ್ನನ್ನೇ ಮರೆತು ಬಿಡುವಂತೆ ಮಾಡಿದ.
ನುಡಿಗಟ್ಟು
  1. a law unto herself (ಸಂಪ್ರದಾಯ ಮೊದಲಾದವನ್ನು ಲೆಕ್ಕಿಸದೆ) ತನಗೆ ಸರಿಯೆಂದು ತೋರಿದ್ದನ್ನೇ ಮಾಡು; ತನಗೆ ಸರಿಯೆಂದು ತೋರಿದಂತಯೇ ವರ್ತಿಸು; ಸ್ವಾತಂತ್ರ್ಯದಿಂದ ನಡೆದುಕೊ: she is a law unto herself ಆಕೆ ತನಗೆ ಸರಿಯೆಂದು ತೋರಿದಂತೆಯೇ ವರ್ತಿಸುತ್ತಾಳೆ.
  2. be herself ಎಂದಿನಂತೆ ಯಾ ಸಹಜವಾಗಿ ನಡೆದುಕೊ, ವರ್ತಿಸು; ಆಕೆಯ ಸಾಮಾನ್ಯವೂ ಸಹಜವೂ ಆದ ರೀತಿಯಲ್ಲಿ ವರ್ತಿಸು.
  3. by herself ಸ್ವತಃ; ಸ್ವಂತವಾಗಿ; ತಾನೊಬ್ಬಳೇ; ಬೇರಾರ ನೆರವೂ ಇಲ್ಲದೆ.