hers ಹರ್ಸ್‍
ಸರ್ವನಾಮ

(ನಾಮಪದಕ್ಕೆ ವಿಶೇಷಣ ಮಾಡದೆ ಸ್ವತಂತ್ರವಾಗಿ ಯಾ ಆಖ್ಯಾತಕ ಪ್ರಯೋಗವಾಗಿ ಬಳಸುವ, she ಪದದ ಷಷ್ಠೀ ವಿಭಕ್ತಿಯ ರೂಪ) ಅವಳ; ಅವಳಿಗೆ – ಸೇರಿದ, ಸಂಬಂಧಿಸಿದ: it is hers ಅದು ಅವಳದ್ದು hers is best ಅವಳದ್ದೇ ಶ್ರೇಷ್ಠI like hers best ನಾನು ಅವಳದ್ದನ್ನು ಅತ್ಯಂತ ಇಷ್ಟಪಡುತ್ತೇನೆ gave me one of hers ಅವಳದ್ದು ಒಂದನ್ನು ನನಗೆ ಕೊಟ್ಟಳುa book of hers ಅವಳ ಪುಸ್ತಕಗಳಲ್ಲಿ ಒಂದು; ಅವಳದ್ದೊಂದು ಪುಸ್ತಕmy father and hersನನ್ನ ತಂದೆ ಮತ್ತು ಅವಳವರು (ಅವಳ ತಂದೆ).

ಪದಗುಚ್ಛ
  1. his and hers
    1. ಅವನ ಮತ್ತು ಅವಳ.
    2. ಗಂಡನ ಮತ್ತು ಹೆಂಡತಿಯ.
    3. ಗಂಡಸಿನ ಮತ್ತು ಹೆಂಗುಸಿನ.
  2. of hers ಅವಳ ಯಾ ಅವಳಿಗೆ ಸಂಬಂಧಿಸಿದ: some friends of hers ಅವಳ ಕೆಲವು ಸ್ನೇಹಿತರು.