See also 2herring-bone
1herring-bone ಹೆರಿಂಗ್‍ಬೋನ್‍
ನಾಮವಾಚಕ
  1. ಹೆರಿಂಗ್‍ ಎಲುಬು ಹೊಲಿಗೆ; ವಂಕಿ ಹೊಲಿಗೆ; ಹೆರಿಂಗ್‍ ಈನಿನ ಎಲುಬುಗಳನ್ನು ಹೋಲುವ ಹೊಲಿಗೆ. Figure: herring-bone
  2. ವಂಕಿವಂಕಿಯಾಗಿ ನೆಯ್ದ ಬಟ್ಟೆ; ವಂಕಿವಿನ್ಯಾಸ ಯಾ ವಂಕಿವಿನ್ಯಾಸದಲ್ಲಿ ನೆಯ್ದಬಟ್ಟೆ.
  3. (ವಾಸ್ತುಶಿಲ್ಪ) ವಂಕಿ ವರಸೆ; ಅಂಕುಡೊಂಕು ಜೋಡಣೆ; ಕಟ್ಟಡ ಮೊದಲಾದವುಗಳಲ್ಲಿ ಕಲ್ಲು, ಇಟ್ಟಿಗೆ ಯಾ ಹೆಂಚುಗಳನ್ನು ಅಂಕುಡೊಂಕಾಗಿ, ಪರ್ಯಾಯವಾಗಿ ಎಡಬಲಗಳಿಗೆ ತಿರುಗುವಂತೆ ಹಾಸುವಿಕೆ.
  4. (ಸ್ಕೀಯಿಂಗ್‍) ಜಾರು ಹಾವುಗೆಗಳನ್ನು ಹೊರಕ್ಕೆ ಮುಖಮಾಡಿ ಇಳಿಜಾರನ್ನು ಏರುವ ಒಂದು ವಿಧಾನ.
See also 1herring-bone
2herring-bone ಹೆರಿಂಗ್‍ಬೋನ್‍
ಸಕರ್ಮಕ ಕ್ರಿಯಾಪದ
  1. ಹೆರಿಂಗ್‍ ಎಲುಬು ಹೊಲಿಗೆಹಾಕು; ವಂಕಿಹೊಲಿಗೆ ಹಾಕು; ಹೆರಿಂಗ್‍ ಈನಿನ ಎಲುಬುಗಳನ್ನು ಹೋಲುವಂತೆ ಹೊಲಿಗೆ, ಟಾಕು – ಹಾಕು.
  2. ಹೆರಿಂಗ್‍ ಎಲುಬು ಮಾದರಿಯಲ್ಲಿ ಗುರುತು ಹಾಕು; ವಂಕಿವಿನ್ಯಾಸ ರಚಿಸು: the herring-boned sand of the floor ಹೆರಿಂಗ್‍ ಎಲುಬು ಮಾದರಿಯ ಗುರುತಿರುವ ತಳದ ಮರಳು.
ಅಕರ್ಮಕ ಕ್ರಿಯಾಪದ

(ಸ್ಕೀಯಿಂಗ್‍) ಜಾರುಹಾವುಗೆಗಳನ್ನು ಹೊರಮುಖವಾಗಿ ತಿರುಗಿಸಿ ಇಳಿಜಾರನ್ನು ಏರು.