heroize ಹಿಅರಇಸ್‍, ಹೆರೋಐಸ್‍
ಸಕರ್ಮಕ ಕ್ರಿಯಾಪದ

(heroise ಎಂದೂ ಪ್ರಯೋಗ)

  1. ವೀರನನ್ನಾಗಿ ಮಾಡು, ಚಿತ್ರಿಸು, ತೋರ್ಪಡಿಸು, ತೋರ್ಪಡಿಸಿಕೊ:politicians heroizing themselves to their constituents ತಮ್ಮ ಕ್ಷೇತ್ರದ ಮತದಾರರಿಗೆ ತಾವು ವೀರರೆಂದು ತೋರ್ಪಡಿಸಿಕೊಳ್ಳುವ ರಾಜಕಾರಣಿಗಳು.
  2. ವೀರಪಟ್ಟಕ್ಕೇರಿಸು; ಪ್ರಾಚೀನ ವೀರನ ವೈಭವಕ್ಕೇರಿಸು: the dead man heroized or even deified ವೀರಪಟ್ಟಕ್ಕೇರಿಸಿದ ಯಾ ಅದಕ್ಕಿಂತಲೂ ಹೆಚ್ಚಾಗಿ ದೈವತ್ವಕ್ಕೆ ಏರಿಸಿದ ತ ವ್ಯಕ್ತಿ.
  3. ವೀರ್ಯವಂತಗೊಳಿಸು; ವೀರ್ಯವಂತನನ್ನಾಗಿ ಮಾಡು: the laureate should heroize the nation which he represents ಆಸ್ಥಾನಕವಿ ತಾನು ಪ್ರತಿನಿಧಿಸುವ ರಾಷ್ಟ್ರವನ್ನು ವೀರ್ಯವಂತಗೊಳಿಸಬೇಕು.
ಅಕರ್ಮಕ ಕ್ರಿಯಾಪದ

ನಾಯಕನಂತೆ ವರ್ತಿಸು; ನಾಯಕಪಾತ್ರವಹಿಸು: heroize and speechify and singsong ನಾಯಕಪಾತ್ರಧಾರಿಯಂತೆ ಕುಣಿ, ಭಾಷಣ ಬಿಗಿ ಮತ್ತು ಹಾಡು ಹೇಳು.