heroine ಹೆರೋಇನ್‍
ನಾಮವಾಚಕ
  1. ನಾಯಿಕೆ; ಶ್ರೇಷ್ಠತೆ, ಧೈರ್ಯ, ಅಸಾಧಾರಣ ಸಾಧನೆ, ಮೊದಲಾದವುಗಳಿಗಾಗಿ ಹೆಸರುವಾಸಿಯಾದ ಇಲ್ಲವೆ ಶ್ಲಾಘಿಸಲ್ಪಟ್ಟ ಹೆಂಗಸು.
  2. (ಕವನ, ನಾಟಕ, ಕಾದಂಬರಿಗಳಲ್ಲಿ) ನಾಯಿಕೆ; ನಾಯಕಿ; ಮುಖ್ಯ ಸ್ತ್ರೀಪಾತ್ರ.
  3. (ಗ್ರೀಕ್‍ ಪ್ರಾಚೀನ ಚರಿತ್ರೆ) ಉಪದೇವತೆ; ದೇವಾಂಶಸ್ತ್ರೀ.
  4. ವೀರಸ್ತ್ರೀ; ವೀರನಾರಿ; Medea seems to have descended from the rank of a goddess into that of a heroine ಮಿಡೀಯ ಎಂಬಾಕೆ ದೇವತೆಯ ಪದವಿಯಿಂದ ವೀರನಾರಿಯ ಪದವಿಗೆ ಇಳಿದಿರುವಂತೆ ಕಾಣುತ್ತದೆ.