hero ಹಿಅರೋ
ನಾಮವಾಚಕ
(ಬಹುವಚನ heroes)
  1. ಮಹಾಪುರುಷ; ಧೀರೋದಾತ್ತ; ಮಹಾಸಾಹಸಿ; ಸಾಹಸ ಕಾರ್ಯಗಳಿಗೂ ಉದಾತ್ತ ಗುಣಗಳಿಗೂ ಮೆಚ್ಚಿಕೆ ಪಡೆದವನು: Newton , a hero of science ನ್ಯೂಟನ್‍, ವಿಜ್ಞಾನಕ್ಷೇತ್ರದ ಧೀರ.
  2. ಪ್ರಖ್ಯಾತ ಯೋಧ; ಮಹಾಯೋಧ.
  3. (ಕಾವ್ಯದ, ನಾಟಕದ ಯಾ ಕಥೆಯ) ನಾಯಕ; ಮುಖ್ಯ ಪುರುಷಪಾತ್ರ.
  4. (ಗ್ರೀಕ್‍ ಪ್ರಾಚೀನ ಚರಿತ್ರೆ) ದೇವಮಾನವ; ದೇವಾಂಶ ಪುರುಷ; ಅತಿಮಾನವ; ದೇವತೆಗಳ ಪ್ರೀತಿಗೆ ಪಾತ್ರನಾದ ಅತಿಮಾನುಷ ವ್ಯಕ್ತಿ.
  5. (ರೂಪಕವಾಗಿ) ಸ್ವದೇಶಕ್ಕಾಗಿ ಹೋರಾಡಿದ ವೀರ: homes for heroes ಮಾಜಿ ಸೈನಿಕರಿಗೆ ಮನೆಗಳು; ನಿತ್ತ ವೀರರಿಗೆ ವಸತಿಗಳು.
ಪದಗುಚ್ಛ

hero’s welcome ವೀರಸ್ವಾಗತ; ವೀರಪುರುಷನಿಗೆ ಸಲ್ಲತಕ್ಕ ಸ್ವಾಗತ.