heritable ಹೆರಿಟಬ್‍(ಬ)ಲ್‍
ಗುಣವಾಚಕ
  1. (ನ್ಯಾಯಶಾಸ್ತ್ರ) ದಾಯಯೋಗ್ಯ; (ಸ್ಥಿರಾಸ್ತಿಯ ವಿಷಯದಲ್ಲಿ) ಉತ್ತರಾಧಿಕಾರಿಗೆ, ವಾರಸುದಾರನಿಗೆ ಸಲ್ಲುವ; ನ್ಯಾಯಸಮ್ಮತವಾದ ಹಕ್ಕುದಾರರಿಗೆ ಸಲ್ಲುವ.
  2. ಪಿತ್ರಾರ್ಜಿತ; ತಂದೆಯಿಂದ ಮಗನಿಗೆ ಸಾಗಿ ಬರುವ.
  3. ಆನುವಂಶಿಕ; ಪಿತ್ರಾರ್ಜಿತವಾಗಿ ಪಡೆಯಬಲ್ಲ; ವಂಶಪಾರಂಪರ್ಯವಾಗಿ, ವಂಶಾನುಕ್ರಮವಾಗಿ – ಪ್ರಾಪ್ತವಾಗಬಲ್ಲ: heritable office ವಂಶಾನುಕ್ರಮವಾಗಿ ದೊರಕಬಲ್ಲ ಹುದ್ದೆ, ಅಧಿಕಾರ.
  4. (ಜೀವವಿಜ್ಞಾನ) (ಯಾವುದೇ ಲಕ್ಷಣ, ಗುಣದ ವಿಷಯದಲ್ಲಿ) ಆನುವಂಶಿಕ; ತಂದೆ ಯಾ ತಾಯಿಯಿಂದ ಮಕ್ಕಳಿಗೆ ಬರುವ.