herb ಹರ್ಬ್‍
ನಾಮವಾಚಕ
  1. (ತಾಳಿನಲ್ಲಿ ದಾರುವಿಲ್ಲದ ಯಾ ತಾಳು ಬಹುಕಾಲ ನಿಲ್ಲದ, ಹೂ ಬಿಟ್ಟ ನಂತರ ನೆಲಕ್ಕೆ ಬಿದ್ದುಹೋಗುವ, ಬೀಜ ಬಿಡುವ) ಸಸ್ಯ; ಗಿಡ.
  2. ಮೂಲಿಕೆ; ನಾರುಬೇರು; ಔಷಧಿ; ಹಸುರು; ಆಹಾರ, ಔಷಧ, ಸುವಾಸನೆ, ರುಚಿ, ಮೊದಲಾದವಕ್ಕೆ ಬಳಸುವ ಎಲೆಗಳು, ಬೀಜಗಳು ಯಾ ಹೂಗಳನ್ನು ಬಿಡುವ ಸಸ್ಯ.