See also 2her
1her ಹರ್‍
ಸರ್ವನಾಮ
  1. ಅವಳನ್ನು; ಆಕೆಯನ್ನು ( she ಎಂಬುದರ ದ್ವಿತೀಯಾ ವಿಭಕ್ತಿ): I like her ನಾನು ಅವಳನ್ನು ಇಷ್ಟಪಡುತ್ತೇನೆ.
  2. (ಆಡುಮಾತು) (ಪ್ರಥಮಾ ವಿಭಕ್ತಿ ಸಹ) ಅವಳು; ಆಕೆ: I am older than her ನನಗೆ ಅವಳಿಗಿಂತ ವಯಸ್ಸಾಗಿದೆ.
  3. (ಪ್ರಾಚೀನ ಪ್ರಯೋಗ) ಅವಳೇ; ಆಕೆಯೇ; ತಾನೇ: she fell and hurt her ಅವಳು ಬಿದ್ದು ತಾನೇ ನೋವು ಮಾಡಿಕೊಂಡಳು.
See also 1her
2her ಹರ್‍
ಷಷ್ಠೀ ಸರ್ವನಾಮ

(she ಎಂಬುದರ ಷಷ್ಠೀ ವಿಭಕ್ತಿ)

  1. (ವಿಶೇಷಣವಾಗಿ) ಅವಳ; ಆಕೆಯ ಯಾ ಆಕೆಗೆ ಸಂಬಂಧಿಸಿದ ಯಾ ಆಕೆಗೆ ಸೇರಿರುವ: her house ಅವಳ ಮನೆher own business ಅವಳ ಸ್ವಂತ ವ್ಯಾಪಾರ.
  2. (Her) (ಬಿರುದುಗಳಲ್ಲಿ) ಆಗಿರುವ: Her Majesty ರಾಣಿ, ಚಕ್ರವರ್ತಿನಿ – ಆಗಿರುವ.
ನುಡಿಗಟ್ಟು

not quite her ಅವಳಿಗಲ್ಲದ್ದು; ಅವಳಿಗೆ ಒಪ್ಪದ ಉಡಿಗೆ ತೊಡಿಗೆ ಮೊದಲಾದವು.