hence ಹೆನ್ಸ್‍
ಕ್ರಿಯಾವಿಶೇಷಣ
  1. ಇಂದಿನಿಂದ; ಈಗಿನಿಂದ; ಈ – ಹೊತ್ತಿನಿಂದ, ಕಾಲದಿಂದ:two years hence ಇನ್ನೂ, ಇಂದಿನಿಂದ ಎರಡು ವರ್ಷಗಳಲ್ಲಿ.
  2. ಇದರ ಫಲವಾಗಿ, ಪರಿಣಾಮವಾಗಿ: learn courage hence! ಇದರ ಫಲವಾಗಿ ಧೈರ್ಯವನ್ನು ಕಲಿ!
  3. ಈ – ಕಾರಣದಿಂದ, ದೆಸೆಯಿಂದ; ಆದುದರಿಂದ; ಇದರಿಂದಾಗಿ: hence the desire to impress the public opinion ಈ ಕಾರಣದಿಂದ ಸಾರ್ವಜನಿಕ ಅಭಿಪ್ರಾಯದ ಮೇಲೆ ಪ್ರಭಾವ ಬೀರುವ ಇಚ್ಛೆ.
  4. ಈ ಊಹೆಯ – ಮೇಲೆ, ಮೇರೆಗೆ, ಪ್ರಕಾರ; ಇದರಿಂದ ಮಾಡಿದ ಊಹೆಯಂತೆ: hence it appears that ಇದರಿಂದ ಮಾಡಿದ ಊಹೆಯಂತೆ ಅದು ಹೀಗೆ ತೋರುತ್ತದೆ.
  5. (ಪ್ರಾಚೀನ ಪ್ರಯೋಗ) ಈ ಮೂಲದಿಂದ; ಇಲ್ಲಿಂದ; ಇದರಿಂದ; ಈ – ಜಾಗದಿಂದ, ಸ್ಥಳದಿಂದ.
ಪದಗುಚ್ಛ
  1. from hence = hence(5).
  2. hence! (ಕಾವ್ಯಪ್ರಯೋಗ ಯಾ ಅಲಂಕಾರಶಾಸ್ತ್ರ) (ಆಜ್ಞೆಯಾಗಿ) ತೊಲಗು! ತೊಲಗಿ ಹೋಗು! ಹೊರಟು ಹೋಗು! ಹೊರಡಾಚೆ! ತೊಲಗಾಚೆ.
ನುಡಿಗಟ್ಟು
  1. hence with ತೆಗೆದುಕೊಂಡು ತೊಲಗು; ಹೊರಟುಹೋಗು: hence with life’s pale lure ಬಾಳಿನ ಕಾಂತಿಹೀನ ಬೆಡಗೆಲ್ಲಾ ಹೊರಟು ಹೋಗಲಿ.
  2. go hence ಸಾಯು; ಈ ಪ್ರಪಂಚವನ್ನು ಬಿಟ್ಟುಹೋಗು: before I go hence and be no more ನಾನು ಈ ಲೋಕದಿಂದ ಹೋಗುವ ಮೊದಲು; ನಾನು ಸಾಯುವ ಮುಂಚೆ.