hemisphere ಹೆಮಿಸಿಅರ್‍
ನಾಮವಾಚಕ
  1. ಅರ್ಧಗೋಳ; ಗೋಳಾರ್ಧ; ಅರೆಗೋಲ.
  2. ಗೋಳಾರ್ಧ; ಭೂಮಿಯ ಅರ್ಧಭಾಗ (ಮುಖ್ಯವಾಗಿ ಭೂಮಧ್ಯರೇಖೆಯಿಂದ ವಿಭಾಜಿತವಾದ ಉತ್ತರಾರ್ಧ ಮತ್ತು ದಕ್ಷಿಣಾರ್ಧ ಗೋಳ) ಅಥವಾ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೂಲಕ ಹಾದುಹೋದಂತೆ ಎಳೆದ ರೇಖೆಯಿಂದ ಪೂರ್ವ ಮತ್ತು ಪಶ್ಚಿಮ ಗೋಳಾರ್ಧ ಎಂದು ವಿಭಾಗ ಮಾಡಿದ ಅರ್ಧ ಭಾಗ.
  3. ಖಗೋಳಾರ್ಧ; ಖಗೋಳದ ಅರ್ಧ ಭಾಗ; ಮುಖ್ಯವಾಗಿ ಕ್ರಾಂತಿವೃತ್ತದಿಂದ ಯಾ ವಿಷುವದ್ವೃತ್ತದಿಂದ ವಿಭಾಜಿತವಾದುದರ ಪರಿಣಾಮವಾಗಿ ಲಭಿಸುವ ಅರ್ಧಗೋಳ.
ಪದಗುಚ್ಛ

Magdeburg hemispheres ಮ್ಯಾಗ್ಡಬರ್ಗ್‍ ಅರ್ಧಗೋಳಗಳು; ಒಟ್ಟಿಗೆ ಕೂಡಿಸಿದಾಗ ಪೂರ್ಣಗೋಳವಾಗುವಂತಿದ್ದು, ಎರಡರ ಮಧ್ಯದಲ್ಲಿರುವ ವಾಯುವನ್ನು ಹೊರಹಾಕಿದಾಗ ಎರಡೂ ಬಿಗಿಯಾಗಿ ಅಂಟಿಕೊಂಡು ವಾಯುಮಂಡಲದ ಒತ್ತಡವನ್ನು ಪ್ರದರ್ಶಿಸುವ ಒಂದು ಜೊತೆ ಹಿತ್ತಾಳೆ ಅರ್ಧಗೋಳ.