heliosis ಹೀಲಿಓಸಿಸ್‍
ನಾಮವಾಚಕ
(ಬಹುವಚನ helioses ಉಚ್ಚಾರಣೆ ಹೀಲಿಓಸೀಸ್‍).
  1. (ಸಸ್ಯವಿಜ್ಞಾನ) ಬಿಸಿಲಮಚ್ಚೆ; ಗಾಜು ಮೊದಲಾದವುಗಳ ಮೂಲಕ ಹಾಯ್ದು ಸೂರ್ಯರಶ್ಮಿಯು ಕೇಂದ್ರೀಕರಿಸಿ ಎಲೆಯ ಮೇಲೆ ಮಾಡುವ ಮಚ್ಚೆ.
  2. ಸೂರ್ಯಾಘಾತ; ಬಿಸಿಲೇಟು; ಬಿಸಿಲಿನ ಹೊಡೆತ; ಬಿಸಿಲಿನ ತಾಪದಿಂದ ಉಂಟಾಗುವ ಅತಿ ಬಳಲಿಕೆ ಯಾ ಕುಸಿತ.