See also 2heliograph
1heliograph ಹೀಲಿಅಗ್ರಾಹ್‍
ನಾಮವಾಚಕ

ಸೌರಲೇಖಿ; ಹೀಲಿಯೊಗ್ರಾಹ್‍:

  1. ಕನ್ನಡಿಯಿಂದ ಪ್ರತಿಫಲಿಸಿದ, ಸೂರ್ಯರಶ್ಮಿಯನ್ನು ಬಳಸಿಕೊಂಡು ಸಂಕೇತಗಳನ್ನು ಕಳುಹಿಸುವ ಒಂದು ಬಗೆಯ ಟೆಲೆಗ್ರಾಹ್‍.
  2. ಹೀಗೆ ಕಳುಹಿಸಿದ ಸಂಕೇತ.
  3. ಸೂರ್ಯನ ಛಾಯಾಚಿತ್ರ ತೆಗೆಯಲು ಬಳಸುವ, ದೂರದರ್ಶಕ ಸಜ್ಜಿತ ಕ್ಯಾಮರ.
  4. ಸೂರ್ಯರಶ್ಮಿಗೆ ಯಾ ಬೆಳಕಿಗೆ ಒಡ್ಡಿ ರಾಸಾಯನಿಕವಾಗಿ ತಯಾರಿಸಿದ ಕೆತ್ತನೆ, ಚಿತ್ರ.
  5. (ಪವನಶಾಸ್ತ್ರ) ಸೂರ್ಯಪ್ರಕಾಶದ ಯಾ ಬಿಸಿಲಿನ ಅವಧಿ ಮತ್ತು ತೀವ್ರತೆಗಳನ್ನು ದಾಖಲಿಸುವ ಸಲಕರಣೆ.
See also 1heliograph
2heliograph ಹೀಲಿಅಗ್ರಾಹ್‍
ಸಕರ್ಮಕ ಕ್ರಿಯಾಪದ
  1. (ಸಂದೇಶವನ್ನು) ಸೌರಲೇಖಿಯ ಮೂಲಕ ಯಾ ಹೀಲಿಯೊಗ್ರಾಹ್‍ ನೆರವಿನಿಂದ ಕಳುಹಿಸು.
  2. ಹೀಲಿಯೊಗ್ರಾಹ್‍ನ ನೆರವಿನಿಂದ ಹೋಟೋ ತೆಗೆ.