heirloom ಏರ್‍ಲೂಮ್‍
ನಾಮವಾಚಕ
  1. (ಸ್ಥಿರಾಸ್ತಿಯನ್ನನುಸರಿಸಿ ಬರುವ) ಚರಾಸ್ತಿ; ಜಿಂದಗಿ; ಕುಲಸ್ವತ್ತು; ಕುಲಧನ: glass cup is preserved as a precious heirloom ಗಾಜಿನ ಬಟ್ಟಲನ್ನು ಅಮೂಲ್ಯ ಕುಲಸ್ವತ್ತಾಗಿ ಜೋಪಾನ ಮಾಡಲಾಗಿದೆ.
  2. ವಂಶಪರಂಪರಾಗತ ವಸ್ತು; ವಂಶಪಾರಂಪರ್ಯವಾಗಿ ಬಂದ ಯಾವುದೇ ಸ್ವಂತ ಸ್ವತ್ತು (ಗುಣಲಕ್ಷಣಗಳ ವಿಷಯದಲ್ಲಿ ರೂಪಕವಾಗಿ ಸಹ): political wisdom is the heirloom of no one class of society ರಾಜಕೀಯ ವಿವೇಕ ಸಮಾಜದ ಯಾವುದೇ ಒಂದು ವರ್ಗದ ವಂಶಪಾರಂಪರ್ಯ ಸ್ವತ್ತಲ್ಲ.