heighten ಹೈಟ(ಟ್‍)ನ್‍
ಸಕರ್ಮಕ ಕ್ರಿಯಾಪದ
  1. (ಇನ್ನೂ) ಎತ್ತರಿಸು; ಏರಿಸು; ಎತ್ತರ ಹೆಚ್ಚಿಸು: the buskin heightened the stature (ನಟರ) ಮೋಜ ಎತ್ತರವನ್ನು ಹೆಚ್ಚಿಸಿತು.
  2. ಹೆಚ್ಚಿಸು; ತೀಕ್ಷ್ಣಗೊಳಿಸು; ತೀವ್ರಗೊಳಿಸು; ಪ್ರಬಲಗೊಳಿಸು: to heighten the flavour ಪರಿಮಳವನ್ನು, ರುಚಿಯನ್ನು ಹೆಚ್ಚಿಸಲು.
  3. (ವರ್ಣನೆಯನ್ನು, ಕಥೆಯನ್ನು) ವಿಸ್ತರಿಸು; ವಿವರಗಳನ್ನು ಸೇರಿಸಿ ಬೆಳಸು: a story somewhat heightened in details ಸ್ವಲ್ಪಮಟ್ಟಿಗೆ ವಿವರಗಳಿಂದ ವಿಸ್ತರಿಸಿದ ಕಥೆ.
  4. (ಬಣ್ಣವನ್ನು) ಏರಿಸು; ಹೆಚ್ಚು ಪ್ರಕಾಶಮಾನವಾಗಿಸು ಯಾ ತೀಕ್ಷ್ಣವಾಗಿಸು.
ಅಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ರೂಪಕವಾಗಿ) ಏರು; ಎತ್ತರವಾಗು:the rock seemed to heighten marvellously ಬಂಡೆ ಆಶ್ಚರ್ಯಕರವಾಗಿ ಎತ್ತರವಾಗುತ್ತಿರುವಂತೆ ತೋರಿತು.
  2. (ಬಣ್ಣದ ವಿಷಯದಲ್ಲಿ) ಹೆಚ್ಚು ಪ್ರಕಾಶಮಾನವಾಗು; ಉಜ್ವಲವಾಗು; ಏರು; ತೀಕ್ಷ್ಣವಾಗು: the colour had heightened in his cheek ಅವನ ಕೆನ್ನೆಯ ಬಣ್ಣ ಏರಿತ್ತು.