height ಹೈಟ್‍
ನಾಮವಾಚಕ
  1. ಎತ್ತರ; ವಸ್ತುವಿನ ತಳದಿಂದ ತುದಿಯವರೆಗಿನ ಯಾ ನಿಂತಿರುವ ವ್ಯಕ್ತಿಯ ಕಾಲಿನಿಂದ ತಲೆಯವರೆಗಿನ ಅಳತೆ.
  2. ಭೂಮಟ್ಟದಿಂದ ಯಾ ಅಂಗೀಕರಿಸಿದ (ಸಾಮಾನ್ಯವಾಗಿ ಸಮುದ್ರ ಮಟ್ಟದಿಂದ ಇರುವ) ಎತ್ತರ; ಔನ್ನತ್ಯ.
  3. ಗಣನೀಯ ಎತ್ತರ; ಬಹಳ ಎತ್ತರ: situated at a height ಬಹಳ ಎತ್ತರದ ಸ್ಥಾನಲ್ಲಿರುವ.
  4. ಎತ್ತರ; ಉನ್ನತ, ಎತ್ತರಸ್ಥಾನ: water falling from a given height ಗೊತ್ತಾದ ಎತ್ತರದಿಂದ ಬೀಳುವ ನೀರು.
  5. ತುದಿ; ನೆತ್ತಿ; ಶಿಖರ: plunged down from the height of the tower ಗೋಪುರದ ತುದಿಯಿಂದ ಕೆಳಕ್ಕೆ ಧುಮುಕಿದನು.
  6. (ಮುದ್ರಣ) ಎತ್ತರ; ಅಚ್ಚುಮೊಳೆಯ ಎತ್ತರ; ಅಚ್ಚುಮೊಳೆಯ ವಿಷಯದಲ್ಲಿತಳಭಾಗದಿಂದ ಮುಖದವರೆಗಿನ ಅಂತರ.
    1. ಪರಾಕಾಷ್ಠೆ; ಯಾವುದರದೇ ತೀವ್ರವಾದ, ಬಿರುಸಾದ ಭಾಗ ಯಾ ಅವಧಿ:the battle was at its height ಕದನವು ಅದರ ಪರಾಕಾಷ್ಠೆಯಲ್ಲಿತ್ತು, ತೀವ್ರವಾಗಿತ್ತು.
    2. ತುತ್ತತುದಿ; ವೈಪರೀತ್ಯ; ಅತಿರೇಕ; ಪರಾಕಾಷ್ಠೆ; ವಿಪರೀತವಾದ, ಅತಿಯಾದ – ಸಂದರ್ಭ ಯಾ ನಿದರ್ಶನ: the height of fashion ಹ್ಯಾಷನ್ನಿನ ತುತ್ತತುದಿ, ಅತಿರೇಕ.
  7. ದಿಣ್ಣೆ; ಮೇಡು; ದಿಬ್ಬ; ತಿಟ್ಟು; ಏರು ನೆಲ:I stood upon a height of 200 yards from the shore ದಡದಿಂದ ಇನ್ನೂರು ಗಜ ದೂರದ ದಿಣ್ಣೆಯ ಮೇಲೆ ನಿಂತೆ.
ಪದಗುಚ್ಛ
  1. at its height ಉಚ್ಛ್ರಾಯ ಸ್ಥಿತಿಯಲ್ಲಿ; ಪರಮಾವಧಿಯಲ್ಲಿ; ಅತ್ಯುನ್ನತ ಮಟ್ಟದಲ್ಲಿ; ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ:the gale was at its height ಚಂಡಮಾರುತ ಪೂರ್ಣಪ್ರಮಾಣದ ಬಿರುಸಿನಲ್ಲಿತ್ತು.
  2. the height of folly, fashion, luxury, etc.ಅವಿವೇಕ, ಹ್ಯಾಷನ್ನು, ಭೋಗ, ಮೊದಲಾದವುಗಳ ಪರಮಾವಧಿ, ತುತ್ತತುದಿ, ಶಿಖರ.
  3. the height of land (ಅಮೆರಿಕನ್‍ ಪ್ರಯೋಗ):
    1. ನೀರನೆತ್ತಿ; ಜಲಶಿರಸ್ಸು; ಬಿದ್ದ ಮಳೆಯ ನೀರು ಬೇರೆಬೇರೆ ದಿಕ್ಕುಗಳಿಗೆ ಹರಿದುಹೋಗುವಂತೆ ಮಾಡುವ ಎತ್ತರದ ನೆಲ.
    2. ಜಲಾನಯನ ಪ್ರದೇಶ.