hedgehog ಹೆಜ್‍ಹಾಗ್‍
ನಾಮವಾಚಕ
  1. ಬೇಲಿಹಂದಿ; ಮುಳ್ಳುಹಂದಿ; ಆತ್ಮರಕ್ಷಣೆಗಾಗಿ ಮುದುರಿಕೊಂಡು ಚೆಂಡಿನಂತೆ ಗುಂಡಾಗಿ ಮೈಮೇಲಿನ ಮುಳ್ಳುಗಳನ್ನು ನಿಗುರಿಸುವ, ಹಂದಿಯಂಥ ಮೂತಿಯೂ, ತೊಗಲಿನ ಮೇಲೆ ಮುಳ್ಳುಗಳೂ ಇರುವ ಎರಿನೇಷಸ್‍ ಕುಲಕ್ಕೆ ಸೇರಿದ, ಸಣ್ಣಗಾತ್ರದ, ರಾತ್ರಿಸಂಚಾರಿಯಾದ ಕೀಟಭಕ್ಷಕ ಸಸ್ತನಿ. Figure: hedgehog-1
  2. ಇದೇ ರೀತಿ ಮೈಮೇಲೆ ಮುಳ್ಳುಗಳಿರುವ ಪಾರ್ಕ್ಯುಫೈನ್‍ ಮೊದಲಾದಯಾವುದೇ ಚಿಕ್ಕಪ್ರಾಣಿ.
  3. (ಸೈನ್ಯ) ಚಿಕ್ಕ ರಕ್ಷಣಾ ಸ್ಥಾನ; ಸುತ್ತಲೂ ಕೋಟೆ ಕೊತ್ತಲಗಳಿಂದ ಭದ್ರಪಡಿಸಿದ, ಸಣ್ಣ, ಸ್ವಸಂಪೂರ್ಣ ರಕ್ಷಣಾ ಸ್ಥಾನ, ನೆಲೆ.
  4. ಜೊತೆಯಲ್ಲಿ ಏಗುವುದಕ್ಕೆ, ಹೊಂದಿಕೊಳ್ಳುವುದಕ್ಕೆ ಸಾಧ್ಯವಾಗದ ಮನುಷ್ಯ; ಮುಳ್ಳುಅಂದಿಯಂಥವನು.
  5. (ಕೆಲವು ಗಿಡಗಳ) ಮುಳ್ಳು(ಮುಳ್ಳಾದ) ಬೀಜಕೋಶ.