heavyweight ಹೆವಿವೇಟ್‍
ನಾಮವಾಚಕ
  1. ಹೆವಿವೇಟ್‍;
    1. ಕೆಲವು ಆಟಗಳಲ್ಲಿ ಆಟಗಾರನ ತೂಕ; ಹವ್ಯಾಸಿ ಮುಷ್ಟಿಮಲ್ಲನದು (ಬಾಕ್ಸರ್‍) 81 ಕಿಗ್ರಾಂ.ಗಿಂತ ಹೆಚ್ಚು (ಇದು ವ್ಯಕ್ತಿನಿರತ ಮುಷ್ಟಿಮಲ್ಲರು, ಕುಸ್ತಿಪಟುಗಳು ಮತ್ತು ತೂಕ ಎತ್ತುವವರಿಗೆ ವ್ಯತ್ಯಾಸವಾಗುತ್ತದೆ).
    2. ಈ ತೂಕದ ಕ್ರಿಡಾಪಟು.
  2. ಹೆವಿವೇಟ್‍; ಅತಿ ಭಾರದ ವ್ಯಕ್ತಿ, ಪ್ರಾಣಿ ಯಾ ವಸ್ತು.
  3. (ಆಡುಮಾತು) ಭಾರಿಕುಳ; ಅಸಾಧಾರಣ ಶಕ್ತಿ, ಸಾಮರ್ಥ್ಯ ಯಾ ಪ್ರಾಮುಖ್ಯ ಉಳ್ಳ ವ್ಯಕ್ತಿ.
ಪದಗುಚ್ಛ

light heavyweight ಲೈಟ್‍ ಹೆವಿವೇಟ್‍; ಲಘು ಹೆವಿವೇಟ್‍:

  1. ಕೆಲವು ಆಟಗಳಲ್ಲಿ ‘ಮಿಡ್ಲ್‍ವೇಟ್‍’ (ಮಧ್ಯಮ ತೂಕ)ಗೂ ‘ಹೆವಿವೇಟ್‍’ಗೂ ನಡುವಣ ತೂಕ (ಹವ್ಯಾಸಿ ಮುಷ್ಟಿ ಕಾಳಗದಲ್ಲಿ 75ರಿಂದ 81ಕಿಲೋಗ್ರಾಂ.)
  2. ಈ ತೂಕದ ಕ್ರೀಡಾ ಪಟು.