heavily ಹೆವಿಲಿ
ಕ್ರಿಯಾವಿಶೇಷಣ
  1. ಭಾರವಾಗಿ; ತೂಕವಾಗಿ: a heavily loaded wagon ಭಾರ(ವಾಗಿ) ತುಂಬಿದ ಗಾಡಿ.
  2. ಭಾರವಾಗಿ; ಬಹು ಪ್ರಯಾಸದಿಂದ; ಮಂದಗಮನದಿಂದ: he walked heavily across the room ಅವನು ಕೊಠಡಿಯ ಈ ಕಡೆಯಿಂದ ಆ ಕಡೆಗೆ ಭಾರವಾದ ಹೆಜ್ಜೆ ಹಾಕಿದ.
  3. ಭಾರೀ ಹೊರೆಯಾಗಿ; ಪೀಡಿಸುತ್ತಾ; ಹಿಂಸಿಸಿ; ಗೋಳಾಡಿಸಿ: cares weigh heavily upon him ಚಿಂತೆಗಳು ಅವನಿಗೆ ಭಾರವಾಗಿ ಕಾಡುತ್ತಿವೆ.
  4. ಬಹಳವಾಗಿ; ಸಖತ್ತಾಗಿ; ವಿಪರೀತವಾಗಿ; suffer heavily ವಿಪರೀತವಾಗಿ ನರಳು .
  5. ವಿಪುಲವಾಗಿ; ಹೇರಳವಾಗಿ; ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ; ವಿಪರೀತವಾಗಿ: it rained heavily ವಿಪರೀವಾಗಿ ಮಳೆ ಸುರಿಯಿತು.
  6. ನಿರ್ಜೀವವಾಗಿ; ನಿಶ್ಯಕ್ತಿಯಿಂದ.
  7. ನೀರಸವಾಗಿ; ನಿರುತ್ಸಾಹವಾಗಿ; ನಿಸ್ತೇಜವಾಗಿ: he read his paper heavily and bored the listeners ಅವನು ತನ್ನ ಲೇಖನವನ್ನು ನೀರಸವಾಗಿ ಓದಿ ಶ್ರೋತೃಗಳನ್ನು ಕೊರೆದ.
  8. ಬಲವಾಗಿ; ಬಿರುಸಾಗಿ; ಪ್ರಚಂಡವಾಗಿ.
  9. ಉಗ್ರವಾಗಿ; ತೀವ್ರವಾಗಿ.