heaven ಹೆವನ್‍
ನಾಮವಾಚಕ
  1. (ಸಾಮಾನ್ಯವಾಗಿ ಆಕಾಶದಿಂದಾಚೆ ಇರುವುದೆಂದು ಪ್ರತೀತಿಯುಳ್ಳ, ಸಾವಿನ ನಂತರ ಹೋಗುವ ಒಳ್ಳೆಯ ಸ್ಥಳವೆಂದು ಭಾವಿಸಲಾಗಿರುವ, ಕೆಲವು ಧರ್ಮಗಳಲ್ಲಿ ದೇವರ ಮತ್ತು ದೇವತೆಗಳ ವಾಸಸ್ಥಳವೆಂದು ಪರಿಗಣಿಸಲಾಗಿರುವ) ಸ್ವರ್ಗ; ದೇವಲೋಕ.
  2. ಆನಂದಧಾಮ; ಪರಮ ಸುಖಾವಾಸ.
  3. ದಿವ್ಯಾನಂದ; ಪರಮಾನಂದ (ಸ್ಥಿತಿ).
  4. (ಆಡುಮಾತು) ಸ್ವರ್ಗ; ಆನಂದದಾಯಕವಾದದ್ದು; ಸಂತೋಷಕರವಾದದ್ದು.
  5. (ಸಾಮಾನ್ಯವಾಗಿ Heaven) ದೇವರು; ದೈವ; ಭಗವಂತ; ಈಶ್ವರ; ಪರಮೇಶ್ವರ: it is heaven’s will ಅದು ದೈವೇಚ್ಚೆ, ದೈವಸಂಕಲ್ಪ.
  6. (ಕಾವ್ಯಪ್ರಯೋಗ ವಿನಾ ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಆಗಸ; ಬಾನು; ಆಕಾಶ; ಅಂತರಿಕ್ಷ:
    1. ಸೂರ್ಯ, ಚಂದ್ರ ಮತ್ತು ತಾರೆಗಳು ಕಾಣಿಸಿಕೊಳ್ಳುವ, ಭೂಮಿಯ ಮೇಲೆ ಮಗುಚಿರುವಂತೆ ಕಾಣುವ ಗೋಳ: the spangled heavens ತಾರಾಖಚಿತ ಆಕಾಶ; ನಕ್ಷತ್ರ ನೆಟ್ಟ ಬಾನು.
    2. ಮೋಡ ತೇಲುವ, ಗಾಳಿ ಬೀಸುವ, ಪಕ್ಷಿ ಹಾರಾಡುವ ವಾಯುಮಂಡಲದ ಪ್ರದೇಶ: the heavens opened ಆಕಾಶ ಬಿರಿಯಿತು; ಬಿರುಮಳೆ ಕರೆಯಿತು.
  7. (ಪಾಶ್ಚಾತ್ಯ ಪ್ರಾಚೀನ ಖಗೋಳ ವಿಜ್ಞಾನ) ಆಕಾಶಗೋಳ; ಪ್ರತಿ ಆಕಾಶಕಾಯವನ್ನು ಆವರಿಸಿ ಅದರೊಡನೆ ಸುತ್ತುತ್ತಿರುವುದಾಗಿ ಊಹಿಸಿದ್ದ ಗೋಳ.
ಪದಗುಚ್ಛ
  1. by heaven! (ಒತ್ತಿ ಹೇಳುವಾಗ, ಆಶ್ಚರ್ಯ, ಭಯ, ಮೊದಲಾದವನ್ನು ಸೂಚಿಸುವ, ಭಾವಸೂಚಕ ಅವ್ಯಯವಾಗಿ) ಅಯ್ಯೋದೇವರೆ! ದೇವರಾಣೆಗೂ!
  2. for heaven’s sake ದೇವರಿಗಾಗಿ! ದೈವ ಪ್ರಿತಿಗಾಗಿ! ದೇವರು ಮೆಚ್ಚುವಂತಾಗಲಿ!
  3. good heavens = ಪದಗುಚ್ಛ \((1)\).
  4. heaven forbid or forfend ದೇವರು ಪಾರುಮಾಡಲಿ! ದೇವರು ಕಾಪಾಡಲಿ!
  5. heavens of heavens (ಯೆಹೂದ್ಯರು ನಂಬಿರುವ) ಏಳು ಊರ್ಧ್ವ ಲೋಕಗಳಲ್ಲಿ ಎಲ್ಲಕಿಂತ ಮೇಲಿರುವ ದೈವಲೋಕ.
  6. Heaven (only) knows ಭಗವಂತನಿಗೇ ಗೊತ್ತು; ದೇವರೇ ಬಲ್ಲ! (ನನಗೆ ತಿಳಿಯದು ಎಂದರ್ಥ).
  7. Heavens above = ಪದಗುಚ್ಛ \((1)\).
  8. in Heaven’s name ದೇವರ ಹೆಸರಿನಲ್ಲಿ! ದೇವರಾಣೆಯಾಗಿ! ದೇವರ ಮೇಲೆ ಆಣೆ ಇಟ್ಟು!.
  9. seventh heaven = ಪದಗುಚ್ಛ \((5)\).
  10. thank heaven(s)! ಅಬ್ಬ! ದೇವರು ಉಳಿಸಿದ, ಪಾರು ಮಾಡಿದ! ದೇವರು ದೊಡ್ಡವನು!
  11. the heavens = heaven(6).
ನುಡಿಗಟ್ಟು
  1. in the seventh heaven:
    1. ಸ್ವರ್ಗ ಸುಖದಲ್ಲಿ; ಪರಮಾನಂದದಲ್ಲಿ.
    2. ಭವ್ಯ ಸ್ಥಿತಿಯಲ್ಲಿ.
  2. move heaven and earth ವಿಶ್ವ ಪ್ರಯತ್ನ ಮಾಡು; ಭಗೀರಥ ಪ್ರಯತ್ನ ಮಾಡು.