See also 2hearty
1hearty ಹಾರ್ಟಿ
ಗುಣವಾಚಕ
( ತರರೂಪ heartier ತಮರೂಪ heartiest)
  1. ಆದರಪೂರ್ವಕ; ಹೃತ್ಪೂರ್ವಕ; ವಿಶ್ವಾಸಪೂರ್ವಕ; ಅಂತಃಕರಣಪೂರ್ವಕ; ಸೌಹಾರ್ದದ: a hearty welcome ಆದರದ ಸ್ವಾಗತ.
  2. ಭಾರಿ; ನಿರರ್ಗಳ; ಅಡತಡೆಯಿಲ್ಲದ; ಇತಿಮಿತಿಯಿಲ್ಲದ: hearty laughter ಭಾರಿ ನಗೆ.
  3. (ಭಾವನೆಗಳ ವಿಷಯದಲ್ಲಿ) ನಿಷ್ಕಪಟ; ಸರಳ.
  4. ನಿಜವಾದ; ಪ್ರಾಮಾಣಿಕವಾದ; ನಿಷ್ಕಪಟವಾದ; ಯಥಾರ್ಥ; ಸಾಚಾ; ಖರೆ: hearty approval ಪ್ರಾಮಾಣಿಕವಾದ ಅಂಗೀಕಾರ, ಒಪ್ಪಿಗೆhearty dislike ನಿಜವಾದ ದ್ವೇಷ.
  5. ದೃಢವಾದ; ಪ್ರಬಲವಾದ; ಹುರುಪಿನ; ಉತ್ಸಾಹಪೂರ್ಣ: hearty support ದೃಢವಾದ ಬೆಂಬಲ.
  6. ರಭಸದ; ಜೋರಾದ; ಬಲವಾದ: hearty kick ಬಲವಾದ ಒದೆತ, ತ್ತೆ.
  7. (ಊಟದ ವಿಷಯದಲ್ಲಿ) ಹೇರಳ; ಸಮೃದ್ಧ; ಪುಷ್ಕಳ; ಯಥೇಷ್ಟ.
  8. ಚೆನ್ನಾಗಿ, ಪುಷ್ಕಳವಾಗಿ, ಯಾ ಭರ್ಜರಿಯಾಗಿ ಊಟಮಾಡುವ: a hearty appetite ಚೆನ್ನಾಗಿ ತಿನ್ನುವ ಶಕ್ತಿ: ಭರ್ಜರಿ ಹೊಟ್ಟೆ.
  9. ಗಟ್ಟಿಮುಟ್ಟಾದ; ಆರೋಗ್ಯದೃಢಕಾಯದ; ಆರೋಗ್ಯವುಳ್ಳ ದೇಹದ: hale and hearty ಗಟ್ಟಿಮುಟ್ಟಾದ, ಆರೋಗ್ಯವಂತನಾದ.
  10. (ನೆಲದ ವಿಷಯದಲ್ಲಿ) ಫಲವತ್ತಾದ.
See also 1hearty
2hearty ಹಾರ್ಟಿ
ನಾಮವಾಚಕ
  1. ದೋಸ್ತಿ; ಗೆಳೆಯ; ಮಿತ್ರ: my hearties (ಮುಖ್ಯವಾಗಿ ನಾವಿಕರನ್ನು ಸಂಬೋಧಿಸುವಾಗ) ಗೆಳೆಯರೇ! ಮಿತ್ರರೇ! ದೋಸ್ತಿಗಳೇ!
  2. (ಬ್ರಿಟಿಷ್‍ ಪ್ರಯೋಗ) (ವಿಶ್ವವಿದ್ಯಾನಿಲಯಗಳಲ್ಲಿನ ಆಡುಮಾತು) ಆಟಗಾರ; ಕ್ರಿಡಾಪಾಟು.
  3. ಸಜ್ಜನ; ಒಳ್ಳೆಯ ವ್ಯಕ್ತಿ.
  4. ಧೈರ್ಯವಂತ.
  5. ನಾವಿಕ.
  6. ನಾವಿಕ ಸಂಗಾತಿ.