hearth ಹಾರ್ತ್‍
ನಾಮವಾಚಕ
  1. (ಮನೆಯಲ್ಲಿನ) ಒಲೆ ಜಾಗ; ಒಲೆಗೂಡಿನ, ಬೆಂಕಿಗೂಡಿನ ನೆಲ(ದ ಭಾಗ).
  2. (ಮನೆಯಲ್ಲಿನ) ಒಲೆಗೂಡು; ಬೆಂಕಿಗೂಡು.
  3. ಮನೆಯಲ್ಲಿನ ಬೆಂಕಿಗೂಡಿನ ಪಕ್ಕ ಯಾ ಮುಂಭಾಗದ ಪ್ರದೇಶ.
  4. (ರೂಪಕವಾಗಿ) ಮನೆ: fight of one’s hearth and altar (ಒಬ್ಬನ) ಮನೆ ಮತ್ತು ಧರ್ಮಕ್ಕಾಗಿ ಹೋರಾಡು.
  5. ಕುಲುಮೆಯ ತಳ; ಕರಗಿದ ಲೋಹವು ಶೇಖರವಾಗುವ ಕುಲುಮೆಯ ತಳಭಾಗ.
ಪದಗುಚ್ಛ

hearth and home ಮನೆ ಮತ್ತು ಅದರ ಸೌಕರ್ಯಗಳು.