heart ಹಾರ್ಟ್‍
ನಾಮವಾಚಕ
  1. ಹೃದಯ; ಗುಂಡಿಗೆ.
  2. ಎದೆ; ವಕ್ಷ: he pressed his child to his heart ಅವನು ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡ.
  3. ಹೃದಯ; ಅಂತಃಕರಣ: (ಬುದ್ಧಿಯ ನೆಲೆಯಾದ ತಲೆಗೆ ವಿರುದ್ಧವಾಗಿ) ಭಾವಗಳ, ಮುಖ್ಯವಾಗಿ ಪ್ರೇಮದ – ನೆಲೆ, ಕೇಂದ್ರ, ಆಶ್ರಯ.
  4. ಹೃದಯ (ಸಂವೇದನೆ); ಅನುಕಂಪ: he has no heart ಅವನಿಗೆ ಹೃದವೇಯ, ಅನುಕಂಪವೇ ಇಲ್ಲ.
  5. ಎದೆ(ಗಾರಿಕೆ); ಕೆಚ್ಚು; ಧೈರ್ಯ; ಗುಂಡಿಗೆ: pluck up (or take) heart ಧೈರ್ಯ ತಂದುಕೊ lose heart ಎದೆಗೆಡು; ಎದೆಗುಂದು; ಧೈರ್ಯ ಕಳೆದುಕೊ.
  6. ಹೃದಯ; ಮನಸ್ಸು; ಒಬ್ಬನ ಮನಸ್ಸಿನ ಸ್ಥಿತಿ ಯಾ ಭಾವನೆ: change of heart ಮನಃಪರಿವರ್ತನೆ; ಹೃದಯ ಪರಿವರ್ತನೆ.
  7. (ಯಾವುದೇ ಒಂದರ) ಕೇಂದ್ರ; ಗರ್ಭ; ಒಳಭಾಗ; ಆಂತರಿಕ ಭಾಗ, ಮುಖ್ಯವಾಗಿ ಮರದ ಚೇಗು.
  8. ಮರ್ಮ; ಜೀವಾಳ; ತಿರುಳು; ಸಾರವತ್ತಾದ ಭಾಗ: the hear of the matter ಈ ವಿಷಯದ ಮರ್ಮ, ತಿರುಳು, ಜೀವಾಳ.
  9. (ಎಲೆಕೋಸು, ಲೆಟ್ಯೂಸ್‍, ಮೊದಲಾದವುಗಳ) ತಲೆ; ಗೊಂಡೆ; ಒತ್ತಾದ ಯಾ ಸಾಂದ್ರವಾದ ಅಗ್ರ ಭಾಗ.
  10. ಹೃದಯಾಕಾರದ ವಸ್ತು.
  11. ಹೃದಯ; ಹೃದಯಾಕಾರದ ಚಿತ್ರ(ಣ).
  12. (ಇಸ್ಪಿಟು) ಆಟೀನು; ಕೆಂಪು ಬಣ್ಣದಲ್ಲಿ ಹೃದಯದ ಚಿತ್ರವಿರುವ ಇಸ್ಪೀಟೆಲೆ.
  13. (ಬಹುವಚನದಲ್ಲಿ) ಆಟೀನ್‍ ರಂಗು.
  14. (ಬಹುವಚನದಲ್ಲಿ) (ಆಟೀನ್‍ ಎಲೆ ಇರುವ ಪಟ್ಟನ್ನು ಯಾ ವರಿಸೆಯನ್ನು ಆಟಗಾರರು ತೆಗೆಉಕೊಳ್ಳದಿರಲು ಪ್ರಯತ್ತಿಸುವ) ಆಟೀನ್‍ ಆಟ.
  15. (ಭೂಮಿಯ, ಜಮೀನಿನ ವಿಷಯದಲ್ಲಿ) ಉರ್ವರೆ; ಫಲವಂತಿಕೆ; ಫಲವತ್ತು: in good heart ಫಲವತ್ತಾಗಿರುವout of heart ಫಲವತ್ತಾಗಿರದ.
  16. ಹೃದ್ರೋಗ; ಹೃದಯಬೇನೆ: I believe he has a heart ಅವನಿಗೆ ಹೃದಯ ರೋಗವಿದೆ ಎಂದು ನಾನು ಅಂದುಕೊಂಡಿದ್ದೇನೆ.
  17. ಆತ್ಮ; ಅಂತರಂಗ; ಅಂತಃಕರಣ; ಆಂತರಿಕ ವಿಚಾರಗಳ, ಆಲೋಚನೆಗಳ ನೆಲೆ.
  18. (ಒಲವನ್ನು ಸೂಚಿಸುವ, ಪ್ರೀತಿಸೂಚಕಪದವಾಗಿ) ಹೃದಯ; ಪ್ರಾಣ: dear heart ನನ್ನ ಹೃದಯವೇ, ಪ್ರಾಣವೇ.
  19. (ನೌಕಾಯಾನ ಮೊದಲಾದವುಗಳಲ್ಲಿ) ಧೀರ; ಎದೆಗಾರ.
ಪದಗುಚ್ಛ
  1. after one’s own heart (ಒಬ್ಬನಿಗೆ) ಇಷ್ಟವಾಗಿ; ಪ್ರಿಯವಾಗಿ; ಹಿಡಿಸಿದಂತೆ; ಇಷ್ಟಕ್ಕೆ ತಕ್ಕಂತೆ; ಇಷ್ಟಾನುಸಾರವಾಗಿ.
  2. at heart:
    1. ಅಂತರಂಗದಲ್ಲಿ; ಆಂತರ್ಯದಲ್ಲಿ; ಹೃದಯಾಂತರಾಳದಲ್ಲಿ.
    2. ಮೂಲತಃ; ನಿಜವಾಗಿ; ವಾಸ್ತವದಲ್ಲಿ.
  3. bless his heart! (ಸಂತೋಷದ ಉದ್ಗಾರ) ವಾ(ಹ್‍)ರೇ ವಾಹ್‍!: bless his heart! how clever he is! ವಾ(ಹ್‍) ರೇ ವಾ(ಹ್‍)! ಅವನು ಎಷ್ಟೊಂದು ಜಾಣ!
  4. bless my heart! (ಆಶ್ಚರ್ಯದ ಉದ್ಗಾರ) ಅರೆರೆ! ಎಲ ಎಲ!: bless my heart! I clean forgot it ಎಲ ಎಲ! ನಾನದನ್ನು ಪೂರ್ತಿ ಮರೆತೇ ಬಿಟ್ಟೆ!
  5. by heart ಕಂಠಪಾಠವಾಗಿ; ಬಾಯಿಪಾಠವಾಗಿ: learn (or say or have) it by heart ಕಂಠಪಾಠ ಕಲಿ; ಬಾಯಿಪಾಠ, ಕಂಠಪಾಠ – ಮಾಡಿಕೊ; ಉರುಹಚ್ಚು.
  6. change of heart ಹೃದಯ ಪರಿವರ್ತನೆ; ಮನಃಪರಿವರ್ತನೆ; ಮನಸ್ಸಿನ ಮಾರ್ಪಾಡು; ಬಹಳ ಕಾಲ ರೂಢಮೂಲವಾಗಿರುವ ಅಭಿಪ್ರಾಯಗಳ ಬದಲಾವಣೆ: on his deathbed he had a change of heart ಮೃತ್ಯುಶಯ್ಯೆಯಲ್ಲಿದ್ದಾಗ ಅವನ ಮನಸ್ಸು ಮಾರ್ಪಾಡಾಯಿತು.
  7. close to (person’s heart) = ಪದಗುಚ್ಛ \((15)\).
  8. dear heart (ವ್ಯಕ್ತಿಯ ವಿಷಯದಲ್ಲಿ, ಪ್ರೇಮಸೂಚಕವಾಗಿ) ಎನ್ನೊಲವೇ! ಪ್ರಿಯ! ಪ್ರಿಯೆ! ಪ್ರಾಣೇಶ್ವರ(ರಿ)! ಹೃದಯೇಶ್ವರ(ರಿ)!
  9. heart of gold ಚಿನ್ನದ ಹೃದಯ; ಬಹಳ ಒಳ್ಳೆಯ ಹೃದಯ, ಮನಸ್ಸು.
  10. heart of oak ಕೆಚ್ಚೆದೆಯವನು.
  11. heart of stone ಕಲ್ಲು ಹೃದಯ; ಕಠಿಣಹೃದಯ ಯಾ ಕ್ರೂರ ಸ್ವಭಾವ.
  12. in heart ಉಲ್ಲಾಸವಾಗಿ; ಗೆಲವಿನಿಂದ.
  13. in one’s heart:
    1. ಗುಟ್ಟಾಗಿ; ಏಕಾಂತವಾಗಿ.
    2. ಆಂತರ್ಯದಲ್ಲಿ; ಅಂತರಂಗದಲ್ಲಿ; ಹೃದಯದಲ್ಲಿ; ಮನಸ್ಸಿನಲ್ಲಿ.
  14. my hearts! (ನೌಕಾಯಾನ) ಕೆಚ್ಚೆದೆಯ ವೀರರೇ!
  15. near one’s heart (ಅತ್ಯಂತ) ಪ್ರೀತಿಪಾತ್ರನಾಗಿ; (ಬಹಳ) ಬೇಕಾದದ್ದಾಗಿ; ಇಷ್ಟವಾದದ್ದಾಗಿ.
  16. out of heart:
    1. (ಜಈನಿನ ವಿಷಯದಲ್ಲಿ) ಬಂಜರಾದ; ಫಲವತ್ತಲ್ಲದ.
    2. ಉತ್ಸಾಹವಿಲ್ಲದೆ; ಮನಸ್ಸಿಲ್ಲದೆ.
  17. sweet heart = ಪದಗುಚ್ಛ \((8)\).
ನುಡಿಗಟ್ಟು
  1. break a person’s heart ಎದೆಯೊಡೆ; ದುಃಖದಲ್ಲಿ ಮುಳುಗಿಸು; ನಿರಾಶೆಗೆ – ತಳ್ಳು, ಬೀಳು: his folly breaks my heart ಅವನ ಅವಿವೇಕ ನನ್ನ ಎದೆ ಬಿರಿಸುತ್ತದೆ, ನನ್ನನ್ನು ನಿರಾಶೆಗೆ ತಳ್ಳುತ್ತದೆ.
  2. cry (one’s) heart out:
    1. ಎದೆ ಬಿರಿಯುವಂತೆ, ಹೃದಯ ವಿದ್ರಾವಕವಾಗಿ, ವಿಪರೀತವಾಗಿ – ಅಳು.
    2. (ಮುಖ್ಯವಾಗಿ ಗುಟ್ಟಿನಲ್ಲಿ, ಯಾವುದೋ ವಿಷಯವನ್ನು ಕುರಿತು) ಹಂಬಲಿಸು; ಕೊರಗು; ಚಿಂತೆಗೊಳಗಾಗು.
  3. do one’s heart good ಹೃದಯವನ್ನು ಉಲ್ಲಾಸಗೊಳಿಸು; ಮನಸ್ಸಿಗೆ ಉಲ್ಲಾಸ ನೀಡು; ಮನಸ್ಸನ್ನು ಹರ್ಷಗೊಳಿಸು.
  4. eat one’s heart out (ಚಿಂತೆ, ತೊಂದರೆ, ಮೊದಲಾದವುಗಳಿಂದ) ಬಡವಾಗು; ಕೃಶವಾಗಿ ಹೋಗು.
  5. find it in one’s heart (ಮುಖ್ಯವಾಗಿ ನಿಷೇಧಾರ್ಥದಲ್ಲಿ) (ಏನನ್ನಾದರೂ ಮಾಡುವುದಕ್ಕೆ) ಮನಸ್ಸಿರು; ಮನಸ್ಸಿಗೆ ಬರು; ಮನಸ್ಸು ಒಪ್ಪು: they could hardly find it in their heart to disturb him ಅವನಿಗೆ ತೊಂದರೆ ಕೊಡಲು ಅವರಿಗೆ ಮನಸ್ಸು ಬರಲಿಲ್ಲ.
  6. from the heart (or the bottom) of one’s heart ಹೃತ್ಪೂರ್ವಕವಾಗಿ; ಅಂತರಂಗದಿಂದ; ಪ್ರಾಮಾಣಿಕವಾಗಿ; ನಿಜವಾಗಿ; ಪೂರ್ತಿ ಪ್ರಾಮಾಣಿಕವಾಗಿ; ನಿರ್ವಂಚನೆಯಿಂದ; ಮನಃಪೂರ್ವಕವಾಗಿ.
  7. give (or lose) one’s heart to ಮನಸೋಲು; ಹೃದಯವನ್ನು ಸೂರೆಕೊಡು; ಹೃದಯವನ್ನು, ಮನಸನ್ನು – ಅರ್ಪಿಸು; ಅನುರಕ್ತನಾಗು.
  8. go to one’s (or the) heart ಹೃದಯ ಕಲಕು; ಮನಸ್ಸು ತಟ್ಟು; ದುಖಃವನ್ನುಂಟುಮಾಡು.
  9. have a heart (ಆಡುಮಾತು) ಕರುಣೆ ಇಡು; ದಯೆ ತೋರಿಸು
  10. have no heart ಹೃದಯವೇ ಇಲ್ಲದಿರು; ಕರುಣೆ ಇಲ್ಲದಿರು; ಕಲ್ಲೆದೆಯಾಗಿರು.
  11. have one’s heart in one’s boots:
    1. ಹೃದಯ ಕುಗ್ಗಿ ಹೋಗು; ಕಂಗೆಡು; ಅತಿ ನಿರುತ್ಸಾಹದಿಂದಿರು; ವಿಷಣ್ಣನಾಗಿರು.
    2. ದಿಗಿಲು ಬೀಳು; ಭಯಪಡು.
  12. have one’s heart in one’s mouth ಪ್ರಾಣಯನ್ನು ಕೈಯಲ್ಲಿ ಹಿಡಿದುಕೊಂಡಿರು; ಎದೆ ಹೌಹಾರು; ಬಲು ದಿಗಿಲು ಬೀಳು; ಬಹಳ ಗಾಬರಿಬೀಳು.
  13. have one’s heart in the right place ಮನಸ್ಸು, ಹೃದಯ, ಉದ್ದೇಶ, ಸಂಕಲ್ಪ – ಒಳ್ಳೆಯದಾಗಿರು: the old gentlemen may have a stern manner, but his heart is in the right place ಆ ಅಜ್ಜನ ರೀತಿ ಉಗ್ರವೆನಿಸಬಹುದು, ಆದರೆ ಅವನ ಮನಸ್ಸು ಮಾತ್ರ ಒಳ್ಳೆಯದು.
  14. have one’s heart set on:
    1. (ಯಾವುದೇ ವಿಷಯ, ವಸ್ತು, ಮೊದಲಾದವುಗಳ ಮೇಲೆ) ಮನಸ್ಸು ನೆಡು; ಮನಸ್ಸು ಮಾಡು; ಅತ್ಯಾಸಕ್ತಿ ಹೊಂದಿರು; ಕಟ್ಟೊಲವು ತೋರು.
    2. ನಿರ್ಧರಿಸು; ದೃಡವಾಗಿ ನಿಶ್ಚಯಿಸು; ಧೃಡ ಸಂಕಲ್ಪ ಕೈಗೊಳ್ಳು: he has his heart set on going to America after his graduation ಪದವಿ ಮುಗಿಸಿದ ತರುವಾಯ ಅಮೆರಿಕಕ್ಕೆ ಹೋಗಲು ಅವನು ದೃಢ ಸಂಕಲ್ಪ ಮಾಡಿದ್ದಾನೆ.
  15. have the heart (ಮುಖ್ಯವಾಗಿ ನಿಷೇಧಾರ್ಥಕ ಪ್ರಯೋಗದಲ್ಲಿ) (ಮಾಡಲು) ತಕ್ಕಷ್ಟು ಕಲ್ಲೆದೆಯುಳ್ಳವನಾಗಿರು; ಮನಸ್ಸು ಬರು; ಗಟ್ಟಿ ಮನಸ್ಸು ಹೊಂದಿರು: no one had the heart to tell him that he was through as an actor ಅವನ ನಟನಸಾಮರ್ಥ್ಯದ ಕಾಲ ಮುಗಿದು ಹೋಯಿತೆಂದು ಅವನಿಗೆ ಹೇಳಿಬಿಡುವಷ್ಟು ಕಲ್ಲೆದೆ ಯಾರಿಗೂ ಇರಲಿಲ್ಲ.
  16. have (thing) at heart (ಯಾವುದಾದರೂ ವಿಷಯದಲ್ಲಿ) ತೀವ್ರಾಸಕ್ತಿ ಇರು.
  17. heart and hand ಉತ್ಸಾಹದಿಂದ.
  18. heart and soul:
    1. ಶಕ್ತಿಈರಿ; ಸರ್ವಶಕ್ತಿಯಿಂದ.
    2. ಪೂರ್ಣ ಶ್ರದ್ಧೆಯಿಂದ; ತೀವ್ರ ಆಸ್ಥೆಯಿಂದ; ಉತ್ಸಾಹಪೂರ್ಣವಾಗಿ.
  19. heart to heart ಆತ್ಮೀಯವಾಗಿ; ಮನಬಿಚ್ಚಿ; ತೆರೆದ ಹೃದಯದಿಂದ; ಮರೆಮಾಚದೆ; ಬಿಚ್ಚುಮನಸ್ಸಿನಿಂದ; ಮುಚ್ಚುಮರೆ ಇಲ್ಲದೆ.
  20. in one’s heart of hearts ಎದೆಯಾಳದಲ್ಲಿ; ಹೃದಯಾಂತರಾಳದಲ್ಲಿ.
  21. lay (thing) to heart (ಏನಾದರೂ ವಿಷಯವನ್ನು) ಮನಸ್ಸಿಗೆ ತೆಗೆದುಕೊ; ಗಂಭೀರವಾಗಿ ಚಿಂತಿಸು; ತೀವ್ರವಾಗಿ ಪರ್ಯಾಲೋಚಿಸು.
  22. one’s heart goes out to (ಒಬ್ಬನ ವಿಷಯದಲ್ಲಿ):
    1. ಪ್ರೀತಿ, ವಿಶ್ವಾಸ – ಹುಟ್ಟು.
    2. ಸಹಾನುಭೂತಿ ಹುಟ್ಟು; ಅನುಕಂಪ ಹರಿ.
  23. one’s heart is not in it (ಒಬ್ಬನಿಗೆ ಯಾವುದೇ ವಿಷಯದಲ್ಲಿ) ಆಸ್ಥೆ, ಆಸಕ್ತಿ, ಮನಸ್ಸು – ಇಲ್ಲದಿರು.
  24. one’s heart stands still ದಿಗಿಲಿನಿಂದ ಕ್ಷಣಕಾಲ ದಂಗು ಬಡಿದಂತಾಗು, ದಿಗ್ಭ್ರಮೆಗೊಳ್ಳು, ಹೃದಯವೇ ನಿಂತುಹೋದಂತಾಗು.
  25. (play etc.) one’s heart out ಎಲ್ಲ ಶಕ್ತಿ, ಬಲ ಬಳಸಿ ಸುಸ್ತಾಗುವವರೆಗೆ (ಆಡು ಮೊದಲಾದವು).
  26. put (or have) one’s heart in (ಯಾವುದೇ ಉದ್ಯಮ ಮೊದಲಾದವುಗಳಿಗೆ) ಹೃದಯವನ್ನೇ ಸಮರ್ಪಿಸಿಕೊ, ತುಂಬ ಹಚ್ಚಿಕೊ, ತೊಡಗಿಸಿಕೊ.
  27. searchings of heart ಸಂಶಯಗಳು; ಶಂಕೆಗಳು; ಅನುಮಾನಗಳು.
  28. one’s heart against ಸುತಾರಾಂ ಒಪ್ಪದಿರು, ಪ್ರಬಲವಾಗಿ ವಿರೋಧಿಸು.
  29. set one’s heart at rest ನೆಮ್ಮದಿಯಾಗಿರು; ಸಮಾಧಾನಹೊಂದು; ಮನಸ್ಸು ಹಗುರವಾಗು; ದುಗುಡವಿಲ್ಲದಂತಾಗು.
  30. set one’s heart on:
    1. (ಯಾವುದೇ ವಿಷಯ, ವಸ್ತು, ಮೊದಲಾದವುಗಳ ಮೇಲೆ) ಮನಸ್ಸು ನೆಡು; ಮನಸ್ಸು ಮಾಡು; ಆಸಕ್ತಿ ಹೊಂದಿರು; ಕಟ್ಟೊಲವು ತೋರು.
    2. ನಿರ್ಧರಿಸು; ದೃಢವಾಗಿ ನಿಶ್ಚಯಿಸು; ದೃಢ ಸಂಕಲ್ಪ ಕೈಗೊಳ್ಳು: he has set his heart on going to America after his graduation ಪದವಿ ಮುಗಿದ ತರುವಾಯ ಅಮೆರಿಕಕ್ಕೆ ಹೋಗಲು ಅವನು ದೃಢ ಸಂಕಲ್ಪ ಮಾಡಿದ್ದಾನೆ.
  31. take heart of grace ಧೈರ್ಯ – ತಾಳು, ವಹಿಸು, ತೆಗೆದುಕೊ.
  32. take (thing) to heart (ಏನಾದರೂ ವಿಷಯವನ್ನು) ಮನಸ್ಸಿಗೆ – ಹಚ್ಚಿಕೊ, ಅಂಟಿಸಿಕೊ; ಅದೇ ಚಿಂತೆಯಲ್ಲಿರು.
  33. union of hearts ಹೃದಯಮೇಳ; ಮನಸ್ಸುಗಳು ಬೆಸೆಯುವುದು; (ಒತ್ತಾಯವಿಲ್ಲದೆ, ಸಹಜವಾಗಿ) ಮನಸ್ಸು ಮನಸ್ಸು ಒಂದಾಗುವುದು; ಅಂತರಂಗ ಮೈತ್ರಿ; ಅಂತಃಕರಣದ ಪ್ರೇಮ; ಪರಸ್ಪರ ಒಲುಮೆ.
  34. wear one’s heart upon one’s sleeve:
    1. ಹೃದಯ ಬಿಚ್ಚಿಡು; ಅಂತರಂಗ – ಪ್ರದರ್ಶಿಸು, ಪ್ರಕಟಿಸು; ಅಂತರಂಗದ ಭಾವನೆಗಳನ್ನು ಎಲ್ಲರಿಗೂ ಹೇಳಿಬಿಡು, ಜಾಹೀರುಪಡಿಸು; ಆತ್ಮೀಯವಾದ ಭಾವನೆಗಳನ್ನು ಬಹಿರಂಗ ಮಾಡಿಬಿಡು: she seemed uninvolved with him, but then she was not the kind who would wear her heart on the sleeve ಅವಳು ಅವನೊಂದಿಗೆ ಅಲಿಪ್ತವಾಗಿದ್ದಂತೆ ತೋರಿದಳು, ಏಕೆಂದರೆ ಅವಳು ತನ್ನ ಅಂತರಂಗದ ಭಾವನೆಗಳನ್ನು ಎಲ್ಲರೆದುರಿಗೆ ಜಾಹೀರುಪಡಿಸುವ ಸ್ವಭಾವದವಳಾಗಿರಲಿಲ್ಲ.
    2. ಸುಲಭವಾಗಿ ಪ್ರೇಮಪಾಶಕ್ಕೆ ಬೀಳು, ಸಿಕ್ಕು; wearing her heart on her sleeve, she gushed over any man who took interest in her ಸುಲಭವಾಗಿ ಪ್ರೇಮಪಾಶಕ್ಕೆ ಸಿಕ್ಕುವ ಸ್ವಭಾವದವಳಾಗಿದ್ದುದರಿಂದ, ಯಾವನೇ ಮನುಷ್ಯ ತನ್ನ ವಿಷಯವಾಗಿ ಆಸಕ್ತಿ ತೋರಿಸಿದರೂ ಅವಳು ಅವನ ಬಗೆಗೆ ಭಾವೋದ್ರೇಕಗೊಳ್ಳುತ್ತಿದ್ದಳು.
  35. win the heart of (person) (ಒಬ್ಬನನ್ನು ಯಾ ಒಬ್ಬಳನ್ನು) ಒಲಿಸಿಕೊ; (ಒಬ್ಬನ ಯಾ ಒಬ್ಬಳ) ಅನುರಾಗ, ಪ್ರೇಮ ಸಂಪಾದಿಸು; ಹೃದಯ ಗೆಲ್ಲು; ಮನಸ್ಸು ಒಲಿಸಿಕೊ.
  36. with all one’s heart:
    1. ಎದೆ ತುಂಬಿ; ಮನಃಪೂರ್ತಿ; ಅತ್ಯಂತ ಸದ್ಭಾವನೆಯಿಂದ; ಹೃತ್ಪೂರ್ವಕವಾಗಿ; ಅತ್ಯಂತ ವಿಶ್ವಾಸದಿಂದ.
    2. ಪ್ರಾಮಾಣಿಕವಾಗಿ; ನಿರ್ವಂಚನೆಯಿಂದ; ನಿಷ್ಕಪಟವಾಗಿ.
    3. ಉತ್ಸಾಹದಿಂದ; ಹುರುಪಿನಿಂದ.