health ಹೆಲ್ತ್‍
ನಾಮವಾಚಕ
  1. (ಶಾರೀರಿಕ ಯಾ ಮಾನಸಿಕ) ಆರೋಗ್ಯ; ಸ್ವಾಸ್ಥ್ಯ; ಸ್ವಸ್ಥವಾಗಿರುವಿಕೆ; ಸುಸ್ಥಿತಿ.
  2. (ಶಾರೀರಿಕ ಯಾ ಮಾನಸಿಕ) ಸ್ಥಿತಿ; ಆರೋಗ್ಯ; ಪ್ರಕೃತಿ: has poor health ಅನಾರೋಗ್ಯ ಪೀಡಿತ.
  3. (ಮುಖ್ಯವಾಗಿ ಆರ್ಥಿಕ ಯಾ ನೈತಿಕ) ಆರೋಗ್ಯ.
  4. ಸ್ವಸ್ತಿಪಾನ:
    1. (ಒಬ್ಬನ ಗೌರವಕ್ಕಾಗಿ) ಆರೋಗ್ಯಭಾಗ್ಯ ಬಯಸಿ ಮಾಡಿದ ಪಾನ.
    2. ಒಬ್ಬನಿಗೆ ಆರೋಗ್ಯಭಾಗ್ಯ ಬಯಸುವುದು; ಆರೋಗ್ಯಾಶಂಸನ.
ಪದಗುಚ್ಛ
  1. for (one’s) health (ಒಬ್ಬನ) ಆರೋಗ್ಯಕ್ಕಾಗಿ; ಆರೋಗ್ಯವಾಗಿರಲು; ಆರೋಗ್ಯ ಪಡೆಯುವುದಕ್ಕಾಗಿ ಯಾ ಉಳಿಸಿಕೊಳ್ಳುವುದಕ್ಕಾಗಿ.
  2. not for (one’s) health (ಒಬ್ಬನಿಗೆ) ಲೌಕಿಕವಾಗಿ – ಒಳ್ಳೆಯದಾಗಿರದ, ಲಾಭದಾಯಕವಲ್ಲದ, ಅನುಕೂಲ ತರದ.