See also 2heal
1heal ಹೀಲ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನನ್ನು, ಗಾಯವನ್ನು) ವಾಸಿಮಾಡು; ಗುಣಪಡಿಸು; ಗುಣಮಾಡು.
  2. (ಜಗಳ, ವೈಮನಸ್ಯ, ಮೊದಲಾದವನ್ನು) ಪರಿಹರಿಸು; ಕೊನೆಗೊಳಿಸು; ಮುಕ್ತಾಯಗೊಳಿಸು; ಕೊನೆಗೊಳಿಸಿ ಸಾಮರಸ್ಯ ತರು, ಸ್ನೇಹ ಬೆಳೆಸು; ಸಮಾಧಾನಗೊಳಿಸು: heal a quarrel ಜಗಳ ಕೊನೆಗೊಳಿಸುtime heals all sorrows ಕಾಲ ಎಲ್ಲ ದುಃಖಗಳನ್ನು ಪರಿಹರಿಸುತ್ತದೆ.
  3. (ವ್ಯಕ್ತಿ, ಸಮುದಾಯ, ಮೊದಲಾದವನ್ನು ದುಃಖ, ಪಾಪ, ನಿರಾಶೆ, ಕಾಯಿಲೆ, ಅಪಾಯ, ವಿನಾಶ, ಮೊದಲಾದವುಗಳಿಂದ) ಪಾರು ಮಾಡು; ಕಾಪಾಡು; ರಕ್ಷಿಸು; ಉದ್ಧಾರ ಮಾಡು.
  4. ಶುದ್ಧೀಕರಿಸು; ಪರಿಶುದ್ಧಗೊಳಿಸು; ದುಷ್ಟ ಗುಣಗಳನ್ನು ಪರಿಹರಿಸು: heal the soul ಆತ್ಮವನ್ನು ಪರಿಶುದ್ಧಗೊಳಿಸು.
ಅಕರ್ಮಕ ಕ್ರಿಯಾಪದ

(ಅನೇಕ ವೇಳೆ up ಒಡನೆ) (ಗಾಯ, ರೋಗ, ಮೊದಲಾದವುಗಳ ವಿಷಯದಲ್ಲಿ) ಮಾಯು; ಆರು; ವಾಸಿಯಾಗು; ಗುಣವಾಗು; ಸುಧಾರಿಸು; ಉಪಶಮನವಾಗು.

See also 1heal
2heal ಹೀಲ್‍
ಸಕರ್ಮಕ ಕ್ರಿಯಾಪದ

= hele.