See also 2headline
1headline ಹೆಡ್‍ಲೈನ್‍
ನಾಮವಾಚಕ
  1. ತಲೆಪಂಕ್ತಿ; ಶಿರೋನಾಮೆ ಮೊದಲಾದವುಗಳನ್ನು ಒಳಗೊಂಡ, (ಮುಖ್ಯವಾಗಿ ದಪಕ್ಷರಗಳಲ್ಲಿ ಮುದ್ರಿಸಿದ) ಪುಟದ ಮೇಲ್ಪಂಕ್ತಿ.
  2. (ವೃತ್ತಿಪತ್ರಿಕೆಯ) ಶೀರ್ಷಿಕೆ; ಶಿರೋನಾಮೆ; ಉಪಶೀರ್ಷಿಕೆ; ಉಪಶಿರೋನಾಮೆ; ದಪ್ಪಕ್ಷರಗಳಲ್ಲಿ ಮುದ್ರಿತವಾಗುವ ವಿಷಯ ನಿರೂಪಕ ಮೇಲ್ಪಂಕ್ತಿ.
  3. (ಬಹುವಚನದಲ್ಲಿ) (ರೇಡಿಯೋ, ದೂರದರ್ಶನ ಸುದ್ದಿ ಪ್ರಸಾರಗಳಲ್ಲಿ ಪೀಠಿಕೆಯಾಗಿ ಹೇಳುವ) ಸುದ್ದಿಯ ಮುಖ್ಯಾಂಶಗಳು.
ನುಡಿಗಟ್ಟು

hit (or make) the headlines (ಆಡುಮಾತು) ಪ್ರಮುಖ ಸುದ್ದಿಯಾಗು; ಸುದ್ದಿಯ ಬಹಳ ಮುಖ್ಯ ವಿಷಯವಾಗು; ಅತಿ ಮುಖ್ಯವಸ್ತುವಾಗು.

See also 1headline
2headline ಹೆಡ್‍ಲೈನ್‍
ಸಕರ್ಮಕ ಕ್ರಿಯಾಪದ
  1. (ವೃತ್ತಪತ್ರಿಕೆಯ) ಯಾವುದೇ ಸುದ್ದಿಗೆ ಶಿರೋನಾಮೆ ಕೊಡು, ಒದಗಿಸು.
  2. ಪತ್ರಿಕೆಗಳಲ್ಲಿ ಶಿರೋನಾಮೆ ಕೊಟ್ಟು ಪ್ರಚಾರ ಮಾಡುವಂತೆ ತುಂಬ ಪ್ರಚಾರ ಮಾಡು.