See also 2hazard
1hazard ಹ್ಯಾಸರ್ಡ್‍
ನಾಮವಾಚಕ
  1. (ಗೆಲ್ಲಲು ತೊಡಕಾದ) ಒಂದು ತೆರದ ದಾಳದಾಟ.
  2. ಅದೃಷ್ಟ; ಸಂಭವ; ದೆಸೆ; ಅಕಸ್ಮಾತ್‍ ಘಟನೆ: games depending upon hazard ಅದೃಷ್ಟವನ್ನುವಲಂಬಿಸಿದ ಆಟಗಳು.
  3. ಅಪಾಯ; ನಷ್ಟ; ಹಾನಿ; ಕೇಡು: a life full of hazards ಅಪಾಯಗಳಿಂದ ತುಂಬಿದ ಬದುಕು.
  4. ಅಪಾಯಕಾರಿ; ನಷ್ಟಕಾರಿ; ಹಾನಿಕಾರಕ; ಕೇಡು ತರುವುದು: health hazards ಆರೋಗ್ಯಕ್ಕೆ ಹಾನಿಕಾರಿಗಳುthe hazard of sending him abroad ಅವನನ್ನು ಹೊರ ದೇಶಕ್ಕೆ ಕಳುಹಿಸುವುದರಿಂದ ಒದಗುವ ಅಪಾಯ.
  5. (ಗಾಲ್‍) ಅಡಚಣೆ; (ರಸ್ತೆ, ನೀರು ಯಾ ಮರಳಿನ ಗುಂಡಿ ಮೊದಲಾದ) ಯಾವುದಾದರೂ ರೀತಿಯ ಅಡಚಣೆಗಳಿರುವ ಆಟದ ಮೈದಾನದ ಭಾಗ.
  6. (ಕೋರ್ಟ್‍ ಟೆನಿಸ್‍) ಗೆಲ್ಲುವ ತೆರಪು.
  7. (ಐರ್ಲೆಂಡಿನಲ್ಲಿ) ಕ್ಯಾಬ್‍ಸಾಂಡು; ಕ್ಯಾಬ್‍ ಬಂಡಿಗಳು ನಿಲ್ಲುವ ಸ್ಥಳ.
ಪದಗುಚ್ಛ
  1. at all hazards ಏನೇ ಬರಲಿ; ಎಷ್ಟೇ ಅಪಾಯ ಒದಗಲಿ.
  2. at hazard (ಪ್ರಾಚೀನ ಪ್ರಯೋಗ) ಅಕಸ್ಮಾತ್ತಾಗಿ; ಯಾದೃಚ್ಛಿಕವಾಗಿ.
  3. losing hazard (ಬಿಲಿಯರ್ಡ್ಸ್‍) (ಸ್ವಂತ ಚೆಂಡು ಗುರಿ ತಪ್ಪಿ ಚೀಲ ತುಂಬುವ) ಸೋಲು ಹೊಡೆತ.
  4. winning hazard (ಬಿಲಿಯರ್ಡ್ಸ್‍) (ಗುರಿ ಚೆಂಡು ಚೀಲ ತುಂಬುವ) ಗೆಲುವಿನ ಹೊಡೆತ.
See also 1hazard
2hazard ಹ್ಯಾಸರ್ಡ್‍
ಸಕರ್ಮಕ ಕ್ರಿಯಾಪದ
  1. ಅಪಾಯಕ್ಕೆ – ಗುರಿ ಮಾಡು, ಈಡು ಮಾಡು.
  2. ಅಪಾಯ ಎದುರಿಸು; ಅಪಾಯಕ್ಕೆ ಈಡು ಮಾಡಿಕೊ.
  3. (ಏನನ್ನಾದರು ಮಾಡುವ, ಹೇಳುವ, ಊಹಿಸುವ) ಸಾಹಸ ಮಾಡು; ಧೈರ್ಯ ಮಾಡು; ಪಣ ತೊಡು; (ಏನನ್ನಾದರು ಮಾಡಲು, ಹೇಳಲು) ಮುನ್ನುಗ್ಗು.