See also 2hawk  3hawk  4hawk  5hawk
1hawk ಹಾಕ್‍
ನಾಮವಾಚಕ
  1. ಗಿಡುಗ; ಹಕ್ಕಿ ಬೇಟೆಗಾಗಿ ಪಳಗಿಸಿದ, ಡೇಗೆಯ ರೆಕ್ಕೆಗಳಿಗಿಂತ ಸ್ವಲ್ಪ ಮೊಟಕಾದ ಮತ್ತು ಗುಂಡಾದ ರೆಕ್ಕೆಗಳುಳ್ಳ, ಮಾಂಸಾಹಾರಿಯಾದ ಒಂದು ಹಿಂಸ್ರ ಪಕ್ಷಿ. Figure: hawk-1
  2. ವಿನಾಶಕ; ಧ್ವಂಸಕ; ಹಾಳು ಬಡಿಯುವವನು.
  3. (ರಾಜಕೀಯ) ಯುದ್ಧ ಪ್ರಚೋದಕ; ಆಕ್ರಮಣವಾದಿ.
ನುಡಿಗಟ್ಟು

know a hawk from a handsaw ಸಾಮಾನ್ಯ ಪರಿಜ್ಞಾನ ಪಡೆದಿರು; (ಲೋಕ) ವ್ಯವಹಾರ ಜ್ಞಾನ ಹೊಂದಿರು; ಸಾಮಾನ್ಯ ವಿವೇಚನೆ ಇರು.

See also 1hawk  3hawk  4hawk  5hawk
2hawk ಹಾಕ್‍
ಸಕರ್ಮಕ ಕ್ರಿಯಾಪದ
  1. ಗಿಡುಗನಂತೆ ಎರಗು, ಆಕ್ರಮಿಸು.
  2. (ಬಾನಕ್ಕಿ ಮೊದಲಾದವುಗಳ ವಿಷಯದಲ್ಲಿ) ಹಾರುತ್ತಾ ಹುಳುಹುಪ್ಪಟೆ ಹಿಡಿ.
ಅಕರ್ಮಕ ಕ್ರಿಯಾಪದ
  1. ಗಿಡುಗನ ಸಹಾಯದಿಂದ ಹಕ್ಕಿ ಬೇಟೆಯಾಡು.
  2. ಗಿಡುಗನಂತೆ ಎರಗು, ಮೇಲೆ ಬೀಳು.
See also 1hawk  2hawk  4hawk  5hawk
3hawk ಹಾಕ್‍
ಸಕರ್ಮಕ ಕ್ರಿಯಾಪದ
  1. (ಸರಕುಗಳನ್ನು) ಮಾರಾಟಕ್ಕಾಗಿ ಹೊತ್ತುಕೊಂಡು ತಿರುಗು.
  2. (ರೂಪಕವಾಗಿ) ಸಾರಿ ಹರಡು; ಪ್ರಚಾರ ಮಾಡು; ಯಾವುದೇ ವಿಷಯವನ್ನು ಮನಮುಟ್ಟುವಂತೆ ಹೊಗಳಿ ಹೇಳು: hawk one’s opinions ತನ್ನ ಅಭಿಪ್ರಾಯಗಳನ್ನು ಹೊಗಳಿಕೊಂಡು ಪ್ರಚಾರ ಮಾಡು.
See also 1hawk  2hawk  3hawk  5hawk
4hawk ಹಾಕ್‍
ಸಕರ್ಮಕ ಕ್ರಿಯಾಪದ

ಕಫವನ್ನು, ಶ್ಲೇಷ್ಮವನ್ನು – ಕಾರು, ಉಗುಳು.

See also 1hawk  2hawk  3hawk  4hawk
5hawk ಹಾಕ್‍
ನಾಮವಾಚಕ

(ಗಾರೆ ಕೆಲಸದವನ) ಕರಣೆ; ಗಾರೆಯನ್ನು ತೆಗೆದುಕೊಳ್ಳುವ, ತಳದಲ್ಲಿ ಹಿಡಿಯುಳ್ಳ, ಚೌಕಾಕಾರದ ಹಲಗೆ.