See also 2haunt
1haunt ಹಾಂಟ್‍
ಸಕರ್ಮಕ ಕ್ರಿಯಾಪದ
  1. (ಒಂದು ಸ್ಥಳಕ್ಕೆ) ಪದೇಪದೇ ಬಂದು ಹೋಗುತ್ತಿರು, ಭೇಟಿ ಮಾಡುತ್ತಿರು; (ಒಂದು ಸ್ಥಳದಲ್ಲಿ) (ಸತತವಾಗಿ) ಸುಳಿದಾಡುತ್ತಿರು.
  2. (ಒಬ್ಬನನ್ನು) ಬೆನ್ನು ಹತ್ತಿರು; ಬಿಡದೆ ಅನುವರ್ತಿಸುತ್ತಿರು; (ಒಬ್ಬನ) ಜೊತೆಯಲ್ಲೇ ಓಡಾಡುತ್ತಿರು.
  3. (ಆಲೋಚನೆಗಳು ಮೊದಲಾದವುಗಳ ವಿಷಯದಲ್ಲಿ) ಮನಸ್ಸಿನಲ್ಲಿ ಪದೇ ಪದೇ ಸುಳಿದಾಡುತ್ತಿರು; ಸದಾ ಸುಳಿದಾಡುತ್ತಿರು; ಮತ್ತೆ ಮತ್ತೆ ತಲೆದೋರುತ್ತಿರು.
ಅಕರ್ಮಕ ಕ್ರಿಯಾಪದ

(ಒಂದು ಸ್ಥಳದಲ್ಲಿ ಯಾ ಒಂದು ಸ್ಥಳದ ಬಳಿ, ಒಬ್ಬನೊಡನೆ) ವಾಡಿಕೆಯಾಗಿ ಇರು; ರೂಢಿಯಾಗಿ ತಂಗಿರು; ಪದ್ಧತಿಯಾಗಿ ನೆಲೆಸಿರು.

See also 1haunt
2haunt ಹಾಂಟ್‍
ನಾಮವಾಚಕ
  1. ಜನ ಸ್ಥಾನ; ಜನರು ಪದೇ ಪದೇ ಂದು ಹೋಗುತ್ತಿರುವ, ಭೇಟಿ ಮಾಡುತ್ತಿರುವ ಯಾ ವಿಶೇಷವಾಗಿ ಸುಳಿದಾಡುವ ಸ್ಥಳ.
  2. ಮೇವುದಾಣ; ಆಹಾರದಾಣ; ಪ್ರಾಣಿಗಳು ವಾಡಿಕೆಯಾಗಿ ಮೇಯುವ, ವನ್ಯಮೃಗಗಳು ವಾಡಿಕೆಯಾಗಿ ಬೇಟೆಯನ್ನು ಕೊಂದು ತಿನ್ನುವ ಸ್ಥಳ.
  3. ಅಪರಾಧಿಗಳ – ನೆಲೆ, ಕೂಟ ಸ್ಥಾನ, ರಹಸ್ಯ ಸ್ಥಾನ; ಅಪರಾಧಿಗಳು ವಾಡಿಕೆಯಾಗಿ ಸೇರುವ ಗುಟ್ಟಿನ ಸ್ಥಳ.