harmonize ಹಾರ್ಮನೈಸ್‍
ಸಕರ್ಮಕ ಕ್ರಿಯಾಪದ
  1. ಸಮರಸ ಉಂಟುಮಾಡು; ಸುಸಂಗತಗೊಳಿಸು; ಹೊಂದಿಕೆಯುಂಟುಮಾಡು; ಸಮನ್ವಯಗೊಳಿಸು.
  2. (ಕಲೆಯ ಒಟ್ಟು ಪರಿಣಾಮಕ್ಕೆ) ಹಿತವಾಗಿರುವಂತೆ ಮಾಡು.
  3. (ಸ್ವರಸಂಘಾತವನ್ನು ರೂಪಿಸಲು) ಸ್ವರಗಳನ್ನು ಒಂದುಗೂಡಿಸು.
ಅಕರ್ಮಕ ಕ್ರಿಯಾಪದ
  1. ಸಮರಸವಾಗಿರು; ಸುಸಂಗತವಾಗಿರು; ಹೊಂದಿಕೆಯಾಗಿರು; ಸಮನ್ವಯವಾಗಿರು.
  2. (ಕಲೆಯ ಒಟ್ಟು ಪರಿಣಾಮಕ್ಕೆ) ಹಿತವಾಗಿರು.