hare ಹೇರ್‍
ನಾಮವಾಚಕ
  1. (ವಿವಿಧ ಬಗೆಯ) ಮೊಲ.
  2. = electric hare.
ಪದಗುಚ್ಛ

hare and hounds ‘ಪೇಪರ್‍ ಚೇಸ್‍’ ಆಟ; ‘ ಮೊಲವೂ ಬೇಟೆನಾಯಿಗಳೂ’ ಎಂಬ ಆಟ; ಕಾಗದದ ಚೂರುಗಳನ್ನು ಎಸೆದುಕೊಂಡು ಹೋಗುವವರನ್ನು ಬೆನ್ನಟ್ಟಿ ಕಂಡುಹಿಡಿಯುವ ಆಟ.

ನುಡಿಗಟ್ಟು
  1. first catch your hare (then cook him) ಮೊದಲು ಮೊಲ ಹಿಡಿ (ಬಳಿಕ ಅದನ್ನು ಬೇಯಿಸುವೆಯಂತೆ); ಹಿಟ್ಟು ದೊರೆತ ಮೇಲೆ ರೊಟ್ಟಿಯ ಯೋಚನೆ.
  2. hare and tortoise ಮೊಲ ಮತ್ತು ಆಮೆ (ಕತೆ ಪ್ರಸಂಗ); ಸತತ ಪ್ರಯತ್ನದಿಂದ ಸಾಮರ್ಥ್ಯದ ಸೋಲು.
  3. hold (or run) with the hare and hunt (or run) with the hounds ಅಲ್ಲೂ ಇರು ಇಲ್ಲೂ ಇರು; ಪರಸ್ಪರ ವಿರೋಧಿಗಳಾದ ಎರಡು ಪಕ್ಷಗಳಲ್ಲೂ ಇರುವಂತೆ ನಡೆದುಕೊ; ಎರಡು ಕಡೆಗೂ ಸೇರಿದವನಂತೆ ವರ್ತಿಸು.
  4. mad as a March hare ಬೆದೆ ಹತ್ತಿದ ಮೊಲದಂತೆ ಹುಚುಹುಚ್ಚಾದ, ಉನ್ಮತ್ತನಾದ.
  5. start a hare ಚರ್ಚೆಯ ವಿಷಯ ಎತ್ತು, ಪ್ರಾರಂಭಿಸು.