hardness ಹಾರ್ಡ್‍ನಿಸ್‍
ನಾಮವಾಚಕ
  1. ಕಾಠಿನ್ಯ; ಗಡಸುತನ:
    1. (ಯಾವುದೇ ಪದಾರ್ಥದ ವಿಷಯದಲ್ಲಿ) ಇನ್ನೊಂದು ಪದಾರ್ಥದ ಮೇಲೆ ಗೆರೆ ಎಳೆಯಬಲ್ಲ, ಇನ್ನೊಂದು ಪದಾರ್ಥದಿಂದ ತನ್ನ ಮೇಲೆ ಗೆರೆ ಎಳೆಯಗೊಡದ ಗುಣ.
    2. (ನೀರಿನ ವಿಷಯದಲ್ಲಿ) ನೊರೆಗೊಡದಿರುವಿಕೆ; ಕರಗಿದ ಕ್ಯಾಲ್ಸಿಯಮ್‍, ಮೆಗ್ನೀಷಿಯಮ್‍ ಮುಂತಾದ ಲವಣಗಳ ಕಾರಣ ಸಾಬೂನು ನೊರೆ ಉಂಟುಮಾಡದಿರುವ ಗುಣ.
  2. (ಎಕ್ಸ್‍ಕಿರಣ ಮುಂತಾದ ವಿಕಿರಣ ವಿಷಯದಲ್ಲಿ) ಕಾಠಿನ್ಯ; ಪದಾರ್ಥವನ್ನು ತೂರಿಸಿಕೊಂಡು ಹೋಗುವ ಗುಣ.
  3. ಒರಟುತನ; ಬಿರುಸು.
  4. ಕಟುತ್ವ; ಕಠೋರತೆ; ನಿಷ್ಠುರತೆ; ನಿರ್ದಯತೆ; ನಿಷ್ಕಾರುಣ್ಯ.
  5. ಯಾತನೆ; ಕಷ್ಟ; ಕ್ಲೇಶ: the hard of life ಬಾಳಿನ ಕ್ಲೇಶ.
  6. ಪೆಡಸಾಗಿರುವಿಕೆ; ಅನಮ್ಯತೆ; ಬಗ್ಗದಿರುವಿಕೆ; ಸೆಡೆತಿರುವಿಕೆ (ರೂಪಕವಾಗಿ ಸಹ).
  7. ಕಠಿನತೆ; ಮಾಡಲು, ಸಹಿಸಲು, ಅರಿಯಲು ಯಾ ಪರಿಹರಿಸಲು – ಕಷ್ಟವಾಗಿರುವಿಕೆ.