hardly ಹಾರ್ಡ್‍ಲಿ
ಕ್ರಿಯಾವಿಶೇಷಣ
  1. ಕಠಿನ ರೀತಿಯಲ್ಲಿ.
  2. ಕಷ್ಟದಿಂದ; ಪ್ರಯಾಸದಿಂದ; ಕೇವಲ ಶ್ರಮದಿಂದ: a hardly-won concession ತುಂಬಾ ಶ್ರಮಪಟ್ಟು ಪಡೆದ ರಿಯಾಯತಿ.
  3. ನಿಷ್ಠುರವಾಗಿ; ಕಠಿನವಾಗಿ; ಕಠೋರವಾಗಿ; ಕ್ರೂರವಾಗಿ: the rule worked hardly ನಿಯಮ ಅನುಸರಣೆಯಲ್ಲಿ ಕ್ರೂರವಾಯಿತು.
  4. ಅಲ್ವ ಸ್ವಲ್ಪ; ಹೆಚ್ಚುಕಡಮೆ ಇಲ್ಲ ಎಂಬಂತೆಯೇ: I hardly know her ಅವಳು ಹೆಚ್ಚುಕಡಮೆ ಗೊತ್ತೇ ಇಲ್ಲ.
  5. ಅಸಂಭವ: he will hardly come now ಅವನು ಈಗ ಬರುವುದು ಅಸಂಭವ.