hardiness ಹಾರ್ಡಿನಿಸ್‍
ನಾಮವಾಚಕ
  1. (ಕಷ್ಟ)ಸಹಿಷ್ಣುತೆ; ತಿತಿಕ್ಷೆ; ಆಯಾಸಕ್ಕೆ ಯಾ ಕಷ್ಟಕ್ಕೆ ಒಗ್ಗಿದ, ಪಳಗಿದ ಸ್ಥಿತಿ; ಸಹನಶಕ್ತಿ; ವಿರೋಧ ಶಕ್ತಿ: a race of great hardiness ಕಷ್ಟ ಸಹಿಷ್ಣುತೆಯುಳ್ಳ ಮಹಾಜನಾಂಗ.
  2. (ಸಸ್ಯದ ವಿಷಯದಲ್ಲಿ) ತಾಳಿಕೆ; ಸಹಿಷ್ಣುತೆ; ಪ್ರತಿಕೂಲವಾದ, ಮುಖ್ಯವಾಗಿ ಕಡಿಮೆ ಉಷ್ಣದ, ಸ್ಥಿತಿಯಲ್ಲಿಯ ಸಸ್ಯ ಬದುಕಬಲ್ಲ ಶಕ್ತಿ.
  3. ಧೈರ್ಯ; ಕೆಚ್ಚು; ಧಾರ್ಷ್ಟ್ಯ; ಸಾಹಸ: hardiness failed her ಧೈರ್ಯ ಅವಳ ಕೈಬಿಟ್ಟಿತು.