See also 2harbour
1harbour ಹಾರ್ಬರ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಬಂದರು; ರೇವು; ನೌಕಾ ನಿಲ್ದಾಣ; ಹಡಗುಗಳಿಗೆ ಆಶ್ರಯ ಸ್ಥಳ.
  2. ಆಶ್ರಯ; ರಕ್ಷಣೆ.
See also 1harbour
2harbour ಹಾರ್ಬರ್‍
ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ( ಸಕರ್ಮಕ ಕ್ರಿಯಾಪದ)

  1. (ಮುಖ್ಯವಾಗಿ ಹುಳು ಹುಪ್ಪಟೆ, ಅಪರಾಧಿ, ಮೊದಲಾದವಕ್ಕೆ) ಎಡೆಗೊಡು; ಆಶ್ರಯ ಕೊಡು; ನೆಲೆ ನೀಡು; ಇಂಬುಗೊಡು; ರಕ್ಷಣೆ ಕೊಡು: they harboured the refugees ಅವರು ನಿರಾಶ್ರಿತರಿಗೆ ಆಶ್ರಯ ನೀಡಿದರು.
  2. ಬಚ್ಚಿಡು; ಗುಟ್ಟಾಗಿಡು; ರಹಸ್ಯವಾಗಿಡು; ಗೋಪ್ಯವಾಗಿಡು: to harbour fugitives ತಲೆತಪ್ಪಿಸಿಕೊಂಡವರನ್ನು ಬಚ್ಚಿಡಲು.
  3. ಮನಸ್ಸಿನಲ್ಲಿ ಹಿಡಿದಿರು, ಹೊಂದಿರು, ಇಟ್ಟುಕೊಂಡಿರು, ಉಳಿಸಿಕೊಂಡಿರು: harbour suspicion ಅನುಮಾನ ಹೊಂದಿರುharbour thoughts of revenge ಸೇಡಿನ ಭಾವನೆಗಳನ್ನು ಇಟ್ಟುಕೊಂಡಿರು.
  4. (ಹಡಗನ್ನು) ರೇವಿನಲ್ಲಿ ನಿಲ್ಲಿಸು; ಬಂದರಿನಲ್ಲಿ ನೆಲೆಗೊಳಿಸು.
ಅಕರ್ಮಕ ಕ್ರಿಯಾಪದ

(ಹಡಗು, ದೋಣಿ) ಬಂದರಿನಲ್ಲಿ ತಂಗು, ಬಂದು ನಿಲ್ಲು.