See also 2happen
1happen ಹ್ಯಾಪನ್‍
ಅಕರ್ಮಕ ಕ್ರಿಯಾಪದ
  1. ಆಗು; ಉಂಟಾಗು; ನಡೆ; ಜರುಗು; ಸಂಭವಿಸು; ಒದಗು; ಘಟಿಸು: how did the accident happen ಅಪಘಾತ ಹೇಗೆ ಸಂಭವಿಸಿತು? what happened next? ಅನಂತರ ಏನಾಯಿತು? accidents happen ಅಪಘಾತಗಳು ಒದಗುತ್ತವೆ; ಅಪಘಾತಗಳನ್ನು ನಿರೀಕ್ಷಿಸಬೇಕಾದದ್ದೇ.
  2. ಆಕಸ್ಮಿಕವಾಗಿ – ಆಗು, ಸಂಭವಿಸು, ಒದಗು; ಸ್ಪಷ್ಟವಾದ ಯಾವುದೇ ಕಾರಣ ಯಾ ಯೋಜನೆ ಇಲ್ಲದೆ ಉಂಟಾಗು: I happened to be out when he called ಅವನು ನೋಡಲು ಬಂದಾಗ, ನಾನು ಅಕಸ್ಮಾತ್ತಾಗಿ ಹೊರಕ್ಕೆ ಹೊಗಿದ್ದೆ. he happened along ಅಕಸ್ಮಾತ್ತಾಗಿ ಅವನು ಬರುತ್ತಿದ್ದ.
  3. (ಒಳ್ಳೆಯ ಯಾ ಕೆಟ್ಟ) ಅದೃಷ್ಟ ಪಡೆದಿರುವ; ಯೋಗ ಹೊಂದಿರು; ಅದೃಷವಿರು: he happens to be rich ಅವನು ಶ್ರೀಮಂತನಾಗಿರುವ ಯೋಗ ಹೊಂದಿದ್ದಾನೆ; ಸುಯೋಗದಿಂದ ಅವನು ಶ್ರೀಮಂತನಾಗಿದ್ದಾನೆ.
  4. (ವ್ಯಕ್ತಿಯನ್ನು) ಆಕಸ್ಮಿಕವಾಗಿ – ಎದುರಾಗು, ಸಂಧಿಸು, ಕಾಣು.
  5. (ವಸ್ತುವನ್ನು) ಆಕಸ್ಮಿಕವಾಗಿ ಪಡೆ, ಹೊಂದು, ಕಾಣು: happened upon a neglected book ಕಡೆಗಣಿಸಿದ್ದ ಪುಸ್ತಕವೊಂದನ್ನು ಅಕಸ್ಮಾತ್ತಾಗಿ ಪಡೆದೆ; ಕಡೆಗಣಿಸಿದ್ದ ಪುಸ್ತಕವೊಂದು ಅಕಸ್ಮಾತ್ತಾಗಿ ದೊರಕಿತು. happened on a clue to the robbery ಕಳ್ಳತನದ ಸುಳಿವೊಂದು ಆಕಸ್ಮಾತ್ತಾಗಿ ಸಿಕ್ಕಿತು.
ಪದಗುಚ್ಛ
  1. as it happens ಅಕಸ್ಮಾತ್ತಾಗಿ; ಅದೃಷ್ಟವಶಾತ್‍: as it happens, I have the cheque book with me ಅದೃಷ್ಟವಶಾತ್‍ ಚೆಕ್‍ ಪುಸ್ತಕ ನನ್ನ ಬಳಿ ಇದೆ.
  2. happend to:
    1. (ಒಬ್ಬನಿಗೆ) ಆಗು; ಸಂಭವಿಸು.
    2. (ಸೌಮ್ಯೋಕ್ತಿಯಾಗಿ) (ಒಬ್ಬನಿಗೆ) ಅಪಘಾತ, ಸಾವು, ಮೊದಲಾದವು – ಆಗು, ಸಂಭವಿಸು: if anything happens to me ನನಗೇನಾದರೂ ಆದರೆ, ಆಗಿಬಿಟ್ಟರೆ, ಆಪಘಾತವಾದರೆ, ಸಾವು ಸಂಭವಿಸಿದರೆ.
See also 1happen
2happen ಹ್ಯಾಪನ್‍
ಕ್ರಿಯಾವಿಶೇಷಣ

ಬಹುಶಃ; ಪ್ರಾಯಶಃ; ಇದ್ದರೂ ಇರಬಹುದು: happen it’ll rain ಬಹುಶಃ ಮಳೆ ಬರುತ್ತದೆ.