handsome ಹ್ಯಾನ್‍ಸಮ್‍
ಗುಣವಾಚಕ
( ತರರೂಪ ರೂಪಕವಾಗಿ handsomer, ತಮರೂಪ ರೂಪಕವಾಗಿ handsomest).
  1. ಅಂದವಾದ – ರೂಪಿನ, ಆಕಾರದ; ಸುಂದರಾಕಾರದ; ಸುಂದರಾಕೃತಿಯ; ಅಂದವಾದ; ಕ್ಷಣವಾದ; ಚೆಲುವಾದ; ಸುಂದರವಾದ.
  2. (ವರ್ತನೆ ಮೊದಲಾದವುಗಳ ವಿಷಯದಲ್ಲಿ):
    1. ಉದಾರ; ಧಾರಾಳ; ಕೊಡುಗೈಯ: handsome present ಉದಾರ ಬಹುಮಾನ.
    2. ಉದಾರ; ಉತ್ತಮ; ದೊಡ್ಡ ರೀತಿಯ; ಆದರದ; ದೊಡ್ಡ ಮನಸ್ಸಿನ; ವಿಶಾಲ ಹೃದಯದ: a handsome treatment ಆದರದ ಸತ್ಕಾರ; ದೊಡ್ಡ ರೀತಿಯ ಉಪಚಾರa handsome compliment ಉತ್ತಮ ಪ್ರಶಂಸೆ.
  3. (ಬೆಲೆ, ಆಸ್ತಿ, ಮೊದಲಾದವುಗಳ ವಿಷಯದಲ್ಲಿ) ಹೆಚ್ಚಿನ; ತುಂಬ; ಅಧಿಕ; ಪುಷ್ಕಲ.
  4. ಚೊಕ್ಕ; ಜಾಣ್ಮೆಯ; ಕುಶಲತೆಯ: a handsome speech ಚೊಕ್ಕ ಭಾಷಣ.
ನುಡಿಗಟ್ಟು
  1. handsome is as handsome does ಸುಶೀಲವೇ ಸುರೂಪ; ಸದ್ವರ್ತನೆಯೇ ಸೌಂದರ್ಯ; ಸದಾಚಾರವೇ ಸುಂದರಾಕಾರ; ಆಕಾರಕ್ಕಿಂತ ಆಚಾರವೇ ಮುಖ್ಯ; ನಡತೆ ಮುಖ್ಯವೇ ಹೊರತು ಆಚಾರವಲ್ಲ.
  2. handsome is that handsome does = ನುಡಿಗಟ್ಟು \((1)\).