See also 2handicap
1handicap ಹ್ಯಾಂಡಿಕ್ಯಾಪ್‍
ನಾಮವಾಚಕ
  1. (ಎಲ್ಲ ಸ್ಪರ್ಧಿಗಳಿಗೂ ಸಮಾನಾವಕಾಶವಿರುವಂತೆ ಆಟಗಾರರಿಗೆ ತಕ್ಕುದಾದ ಮುಂದೋಟ ಕೊಡುವುದು, ಕುದುರೆಗೆ ತಕ್ಕುದಾದ ಭಾರ ಹೊರಿಸುವುದು, ಮೊದಲಾದವುಗಳನ್ನು ಮಾಡುವ ಮೂಲಕ) ಸಮಾನಗೊಳಿಸಿದ – ಸ್ಪರ್ಧೆ, ಜೂಜು.
  2. ಸಿಂತರಿ:
    1. (ಸ್ಪರ್ಧಿಗಳ ಅವಕಾಶವನ್ನು ಸಮಾನಗೊಳಿಸಲೆಂದು ಕೆಲವಕ್ಕೆ) ಹೊರಿಸಿದ ಹೆಚ್ಚಿನ ಭಾರ ಯಾ ಇತರ ನಿರ್ಬಂಧ.
    2. (ಸ್ಪರ್ಧೆಗೆ ಕೊಟ್ಟ ಯಾವುದೇ) ರಿಯಾಯಿತಿ; ಅನುಕೂಲ.
    3. (ಗಾಲ್‍ ಆಟದಲ್ಲಿ) ಹೆಚ್ಚುವರಿ ಹೊಡೆತ; ಆಟದ ಬಯಲಿನಲ್ಲಿಯ ಕುಳಿಯನ್ನು ಯಾ ಕುಳಿಗಳನ್ನು ತುಂಬಲು ಪ್ರಥಮ ಶ್ರೇಣಿಯ ಆಟಗಾರನಿಗೆ ಸಾಮಾನ್ಯವಾಗಿ ಆವಶ್ಯಕವಾಗುವ ಹೊಡೆತಗಳಿಗಿಂತ ಹೆಚ್ಚಿನ ಹೊಡೆತಗಳ ಸಂಖ್ಯೆ.
  3. (ರೂಪಕವಾಗಿ) ಅಡ್ಡಿ; ತೊಂದರೆ; ಅಡಚಣೆ; ಅಡೆತಡೆ; ಯಾವುದಾದರೂ ಕಾರ್ಯಸಾಧನೆಗಿರುವ – ತಡೆ, ಪ್ರತಿಬಂಧ, ಅನನುಕೂಲ.
See also 1handicap
2handicap ಹ್ಯಾಂಡಿಕ್ಯಾಪ್‍
ಸಕರ್ಮಕ ಕ್ರಿಯಾಪದ
  1. ಸಿಂತರಿಹಾಕು; ಸ್ಪರ್ಧಿಗೆ ಭಾರಹೊರಿಸು, ಪ್ರತಿಬಂಧಕ ಕಲ್ಪಿಸು.
  2. (ರೂಪಕವಾಗಿ) ಪ್ರತಿಬಂಧಕ ಕಲ್ಪಿಸು.
  3. (ರೂಪಕವಾಗಿ) (ಪರಿಸ್ಥಿತಿಯ ವಿಷಯದಲ್ಲಿ) (ಒಬ್ಬನಿಗೆ) ಅಡ್ಡಿಪಡಿಸು; ಅಡಚಣೆಯೊಡ್ಡು; ಪ್ರತಿಕೂಲಮಾಡು; ಪ್ರತಿಬಂಧಕವಾಗಿರು.