See also 2hamstring
1hamstring ಹ್ಯಾಮ್‍ಸ್ಟಿಂಗ್‍
ನಾಮವಾಚಕ

ಮಂಡಿರಜ್ಜು; ಜಾನುರಜ್ಜು:

  1. ಮಂಡಿಯ ಹಿಂಭಾಗದಲ್ಲಿರುವ ಐದು ಸ್ನಾಯುರಜ್ಜುಗಳಲ್ಲೊಂದು.
  2. (ಚತುಷ್ಪಾದಿಗಳಲ್ಲಿ) ಹಿಂಗಾಲ ಮಂಡಿಯ ಹಿಂದಿರುವ ದೊಡ್ಡ ಸ್ನಾಯುರಜ್ಜು.
See also 1hamstring
2hamstring ಹ್ಯಾಮ್‍ಸ್ಟ್ರಿಂಗ್‍
ಸಕರ್ಮಕ ಕ್ರಿಯಾಪದ

(ಭೂತರೂಪ ಮತ್ತು ಭೂತಕೃದಂತ hamstringed ಯಾ hamstrung).

  1. ಕಾಲುಮುರಿ; ಮಂಡಿರಜ್ಜು ಕತ್ತರಿಸಿ ದುರ್ಬಲಗೊಳಿಸು ಯಾ ನಿಷ್ಕ್ರಿಯಗೊಳಿಸು; ಮನುಷ್ಯನನ್ನು ಯಾ ಪ್ರಾಣಿಯನ್ನು ಕುಂಟುಮಾಡು.
  2. (ರೂಪಕವಾಗಿ) ದುರ್ಬಲಗೊಳಿಸು ಯಾ ನಿಷ್ಕ್ರಿಯಗೊಳಿಸು; ಕ್ರಿಯಾಶಕ್ತಿಯನ್ನು ಯಾ ಶಕ್ತಿಸಾಮರ್ಥ್ಯವನ್ನು ನಾಶಮಾಡು.