halve ಹಾವ್‍
ಸಕರ್ಮಕ ಕ್ರಿಯಾಪದ
  1. ಅರ್ಧರ್ಧಮಾಡು; ಅರ್ಧಿಸು; ವಿಭಾಗಿಸು.
  2. ಸಮಪಾಲು ಮಾಡು; ಸಮಪಾಲಾಗಿ – ಹಂಚು ಯಾ ಹಂಚಿಕೋ.
  3. ಅರ್ಧಕ್ಕಿಳಿಸು; ಅರೆಪಾಲಾಗಿಸು.
  4. (ಮರಗೆಲಸ) (ಒಂದರ ಮೇಲೊಂದು ಕೂಡುವ ಯಾ ಅಡ್ಡಡ್ಡವಾಗಿ ಸೇರುವ ತೊಲೆ ಮೊದಲಾದವುಗಳನ್ನು) ಒಂದೊಂದರ ಅರ್ಧದಷ್ಟು ದಪ್ಪ ಕತ್ತರಿಸಿ ಹಾಕಿ ಜೋಡಿಸು; ಸಂಧಿಸಿದ ಕಡೆ ಅವುಗಳ ಅರ್ಧರ್ಧ ದಪ್ಪ ತೆಗೆದು ಹಾಕಿ ಒಟ್ಟಿಗೆ ಕೂಡಿಸು: halve together ಅರೆಗೂಡಿಸು; ಮರದ ಎರಡು ತುಂಡುಗಳನ್ನು ಅವುಗಳ ದಪ್ಪದಲ್ಲಿ ಅರ್ಧರ್ಧ ಕೆತ್ತಿ ಹಾಕಿ, ಒಂದರೊಡನೊಂದನ್ನು ಕೂಡಿಸು.
  5. (ಗಾಲ್‍ ಆಟ):
    1. ಎದುರಾಳಿ ಹೊಡೆದಷ್ಟು ಹೊಡೆತಗಳಲ್ಲೇ (ಕುಳಿ) ತುಂಬು.
    2. (ಪಂದ್ಯದಲ್ಲಿ) ಎದುರಾಳಿಯಷ್ಟೇ ಕುಳಿ ಗಳಿಸು, ತುಂಬು : halve a hole with (ಗಾಲ್‍) ಎದುರಾಳಿಯು ಎಷ್ಟು ಹೊಡೆತಗಳಲ್ಲಿ ಕುಳಿ ತುಂಬುತ್ತಾನೋ ಅಷ್ಟೇ ಹೊಡೆತಗಳಲ್ಲಿ ತಾನೂ ಕುಳಿ ತುಂಬು; ಸರಿಸಮ ಹೊಡೆತಗಳಲ್ಲಿ ಕುಳಿ ತುಂಬು: halve a match (ಗಾಲ್‍) ಎದುರಾಳಿಯಷ್ಟೇ ಯಾ ಅವನಿಗೆ ಸರಿಸಮವಾದಷ್ಟು ಕುಳಿಗಳನ್ನು ಪಡೆ, ತುಂಬು.
ನುಡಿಗಟ್ಟು
  1. by halves:
    1. ಅರ್ಧಮರ್ಧ; ಅರೆಬರೆ; ಅಸಂಪೂರ್ಣವಾಗಿ.
    2. ಅರೆಮನಸ್ಸಿನಿಂದ.
  2. go halves ಸಮಪಾಲು ಮಾಡಿಕೊ; ಸಮಪಾಲಾಗಿ ಹಂಚಿಕೊ.