hall ಹಾಲ್‍
ನಾಮವಾಚಕ
  1. (ಅರಮನೆ ಮೊದಲಾದವುಗಳಲ್ಲಿ) ವಿಶಾಲವಾದ ಸಾರ್ವಜನಿಕ – ಸಭಾಂಗಣ, ಹಜಾರ, ತೊಟ್ಟಿ.
  2. (ಮುಖ್ಯವಾಗಿ ಜಈನುದಾರನ) ನಿವಾಸ; ವಾಡೆ; ಸೌಧ; ಮಹಲು; ಮಂದಿರ; ಭವನ; ದೊಡ್ಡ ವಾಸದ ಮನೆ.
  3. (ಇಂಗ್ಲೆಂಡಿನ ಮಧ್ಯಯುಗದ ಮನೆಯಲ್ಲಿನ) ಮುಖ್ಯ ವಾಸಕೋಣೆ; ದಿವಾನಖಾನೆ; ಹಗಲಿನಲ್ಲಿ ದಿನನಿತ್ಯದ ಊಟ, ಆಟಪಾಟ, ಮಾತುಕತೆ, ಮೊದಲಾದವುಗಳಿಗಾಗಿ ಬಳಸುವ ಕೊಠಡಿ.
  4. (ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ವಾಸಕ್ಕಾಗಿಯೋ ಶಿಕ್ಷಣಕ್ಕಾಗಿಯೋ ಪ್ರತ್ಯೇಕವಾಗಿ ಇಟ್ಟಿರುವ) ಗೃಹ; ಮಂದಿರ; ಕಟ್ಟಡ.
  5. (ಇಂಗ್ಲೆಂಡಿನ ಕಾಲೇಜುಗಳಲ್ಲಿ):
    1. (ಸರ್ವಸಮಾನ) ಊಟದ ಹಜಾರ; ಭೋಜನ ಶಾಲೆ.
    2. (ಅದರಲ್ಲಿ ಮಾಡುವ) ಭೋಜನಕೂಟ; ಕೂಡೂಟ.
  6. ವೃತ್ತಿಸಂಘದ ಭವನ, ಕಟ್ಟಡ, ಉದಾಹರಣೆಗೆ Saddlers’ Hall ಜೇನುಗಾರರ ಭವನ.
  7. ಸಾರ್ವಜನಿಕ ಕಾರ್ಯಕಲಾಪಗಳನ್ನು ನಡೆಸುವ:
    1. ದೊಡ್ಡ ಕೋಣೆ; ಹಜಾರ; ಸಭಾಂಗಣ.
    2. ಕಟ್ಟಡ; ಮಂದಿರ; ಗೃಹ.
  8. ಮನೆಯೊಳಕ್ಕೆ ಹೋಗುವ ಹಾದಿಯಲ್ಲಿರುವ – ನಡವೆ, ಮುನ್ನಂಗಳ, ಯಾ ಕೊಠಡಿ.
  9. (ಅಮೆರಿಕನ್‍ ಪ್ರಯೋಗ) (ಕಟ್ಟಡದ) ನಡವೆ ಯಾ ಒಳಹಾದಿ.
  10. (ಬಹುವಚನದಲ್ಲಿ) ಕಲಾಮಂದಿರ; ಸಂಗೀತ, ನಾಟ್ಯ, ವಿವಿಧ ವಿನೋದಾವಳಿ, ಮೊದಲಾದವುಗಳಿಗಾಗಿ ಇರುವ ಸಭಾಂಗಣ ಯಾ ರಂಗಮಂದಿರ.
ಪದಗುಚ್ಛ
  1. Hall of Fame (ಅಮೆರಿಕನ್‍ ಪ್ರಯೋಗ) ಕೀರ್ತಿ ಭವನ; ಖ್ಯಾತಿಗೃಹ; ಯಶೋಮಂದಿರ; ವಿಖ್ಯಾತ ಪುರುಷರ ಸ್ಮಾರಕಗಳುಳ್ಳ ಗೃಹ.
  2. Liberty Hall ಸ್ವಾತಂತ್ರ ಗೃಹ; ಸಲಿಗೆಯಿಂದ ಇರಬಹುದಾದ ಜಾಗ, ಮನೆ; ನಿರ್ಬಂಧವಿಲಲದೆ ತನ್ನ ಮನೆಯಲ್ಲೆ ಇದ್ದಂತೆ ಇರಬಹುದಾದ ಸ್ಥಳ.
  3. servants’ hall ಆಳುಗಳ (ಊಟದ) ಕೊಠಡಿ, ಕೋಣೆ.