half-baked ಹಾಹ್‍ಬೇಕ್ಟ್‍
ಗುಣವಾಚಕ
  1. ಅರೆ ಬೇಯಿಸಿದ; ಅರೆಬೆಂದ.
  2. (ರೂಪಕವಾಗಿ) ಅಪರಿಣತ; ಅಸಮರ್ಪಕವಾಗಿ ಯೋಜಿಸಿದ, ತಯಾರಿಸಿದ; ಶ್ರದ್ಧೆಯಿಂದ ಮಾಡಿರದ: a half plan ಅಸಮರ್ಪಕವಾಗಿ ತಯಾರಿಸಿದ ಯೋಜನೆ.
  3. (ರೂಪಕವಾಗಿ) ಅಪಕ್ವ; ಎಳಸು; ಅನುಭವ, ವಿವೇಚನೆ, ಬುದ್ಧಿ ಯಾ ವ್ಯವಹಾರಜ್ಞಾನ ಸಾಲದ: a half-baked individual ಅರೆಬೆಂದ ಮನುಷ್ಯ; ಎಳೆನಿಂಬೆಕಾಯಿ; ಎಳಸು (ಬುದ್ಧಿಯವನು): ವ್ಯವಹಾರಜ್ಞಾನ ಸಾಲದವನು.
  4. (ಆಡುಮಾತು) ಮಂದಬುದ್ಧಿಯ; ದಡ್ಡ.
  5. (ಆಡುಮಾತು) ವಕ್ರ; ತಿಕ್ಕಲಿನ; ವಿಚಿತ್ರ ಬುದ್ಧಿಯ.
  6. ಸಾಮಾನ್ಯ ಮಟ್ಟದ; ಸಾಧಾರಣ ಗುಣದ: half-baked ideas ಸಾಮಾನ್ಯ ಮಟ್ಟದ. ಅಬಿಪ್ರಾಯಗಳು.