hair-line ಹೇರ್‍ ಲೈನ್‍
ನಾಮವಾಚಕ
  1. ಕೂದಲ – ಹುರಿ, ಹಗ್ಗ; ಕೇಶರಜ್ಜು; ಕೂದಲಿನಿಂದ ತಯಾರಿಸಿದ ಹುರಿ, ಹಗ್ಗ.
  2. ಕೂದಲಗೀಟು; ಬರವಣಿಗೆಯಲ್ಲಿ ಅಕ್ಷರಗಳ ಸೂಕ್ಷ್ಮ ಮೇಲ್ಗೆರೆ.
  3. ಕೂದಲ ಗೆರೆ; ಮುದ್ರಣದಲ್ಲಿ ತೆಳುವಾದ ಓರೆಗೆರೆ.
  4. (ವ್ಯಕ್ತಿಯ ಹಣೆ ಮೊದಲಾದವುಗಳಲ್ಲಿನ) ಕೂದಲ ಅಂಚು.
  5. ಕೂದಲಗೆರೆ; ಕೇಶರೇಖೆ; ತೀರ ತೆಳುವಾದ ಗೆರೆ, ಬಿರುಕು, ಪಟ್ಟೆ, ಮೊದಲಾದವು.