See also 2hail  3hail  4hail  5hail
1hail ಹೇಲ್‍
ನಾಮವಾಚಕ
  1. ಆಲಿಕಲ್ಲುಗಳು.
  2. (ಕ್ಷಿಪಣಿಗಳು, ಶಾಪಗಳು, ಬಯ್ಗಳು, ಪ್ರಶ್ನೆಗಳು, ಮೊದಲಾದವುಗಳ) ಸುರಿಮಳೆ.
See also 1hail  3hail  4hail  5hail
2hail ಹೇಲ್‍
ಸಕ್ರಿ
  1. ಜೋರಾಗಿ ಸುರಿಸು; ರಭಸದಿಂದ ಬೀಳಿಸು; ಕೆಡವು.
  2. (ರೂಪಕವಾಗಿ) (ಏಟು, ಮಾತು, ಮೊದಲಾದವನ್ನು) ಮಳೆಗರೆ; ಬಿರುಸಾಗಿ ಸುರಿ.
ಅಕರ್ಮಕ ಕ್ರಿಯಾಪದ

ಅಲಿಕಲ್ಲಿನಂತೆ ಬೀಳು; ರಭರದಿಂದ ಸುರಿ.

ಪದಗುಚ್ಛ

it is hailing ಆಲಿಕಲ್ಲು (ಮಳೆ) ಬೀಳುತ್ತಿದೆ.

See also 1hail  2hail  4hail  5hail
3hail ಹೇಲ್‍
ಭಾವಸೂಚಕ ಅವ್ಯಯ

(ಗ್ರಾಂಥಿಕ ಪ್ರಯೋಗ) (ಯಾರನ್ನಾದರೂ ಎದುರಿನಲ್ಲಿ ಕಂಡಾಗ ಒಸಗೆ ಸೂಚಿಸುವ ಸಂಬೋಧನ ಪದ) ಗೆಲ್‍! ಗೆಲವು! ಜಯವಾಗಲಿ! ಜೈ! ಸ್ವಸ್ತಿ! ಶುಭವಾಗಲಿ!

ಪದಗುಚ್ಛ

Hail Mary = Ave Maria.

See also 1hail  2hail  3hail  5hail
4hail ಹೇಲ್‍
ಸಕರ್ಮಕ ಕ್ರಿಯಾಪದ
  1. ವಂದಿಸು; ನಮಸ್ಕರಿಸು.
  2. (ವ್ಯಕ್ತಿಯನ್ನು ದೊರೆ ಎಂದು ಮುಂತಾಗಿ) ಕರೆ; ಕೂಗು; ಸಂಬೋಧಿಸು.
  3. (ಹಡಗು, ಮನುಷ್ಯ, ಮೊದಲಾದವರ ಗಮನ ಸೆಳೆಯಲು ದೂರದಿಂದ) ಕೂಗು; ಕೂಗು ಹಾಕು.
ಅಕರ್ಮಕ ಕ್ರಿಯಾಪದ

(ಮನುಷ್ಯ, ಹಡಗು, ಮೊದಲಾದವುಗಳ ವಿಷಯದಲ್ಲಿ)(ಒಂದು ಊರಿನಿಂದ, ಸ್ಥಳದಿಂದ) ಬರು; ಬಂದಿಳಿ; ಆಗಮಿಸು: he hails from the hill country ಅವನು ಮಲೆನಾಡಿನಿಂದ ಬಂದಿದ್ದಾನೆ.

ಪದಗುಚ್ಛ
  1. hail him (as) king ದೊರೆಯೆಂದು – ವಂದಿಸು, ಸಂಬೋಧಿಸು.
  2. within hailing distance ಕೂಗುದೂರದಲ್ಲಿ; ಕೂಗಿ ಗಮನ ಸೆಳೆಯುವಷ್ಟು ಹತ್ತಿರದಲ್ಲಿ (ರೂಪಕವಾಗಿ ಸಹ).
See also 1hail  2hail  3hail  4hail
5hail ಹೇಲ್‍
ನಾಮವಾಚಕ

ಅಭಿವಂದನೆ; ಸಂಬೋಧನೆ.

ಪದಗುಚ್ಛ

within hail ಕೂಗಳತೆಯಲ್ಲಿ; ಕೂಗುವಷ್ಟು, ಸಂಬೋಧಿಸುವಷ್ಟು – ಹತ್ತಿರದಲ್ಲಿ: within hail of the telephone ಟೆಲಿಹೋನಿನಲ್ಲಿ ಕರೆಯುವಷ್ಟು ಹತ್ತಿರದಲ್ಲಿ.