See also 2habit
1habit ಹ್ಯಾಬಿಟ್‍
ನಾಮವಾಚಕ
  1. ಪದ್ದತಿ; ರೂಢಿ; ಅಭ್ಯಾಸ; ಬಳಕೆ; ವಾಡಿಕೆ; ಪಾಟಿ; ಚಾಳಿ; ಚಾಲು; ಚಟ: he is in the habit of contradiction ಏತಿ ಎಂದರೆ ಪ್ರೇತಿ ಎನ್ನುವುದು ಅವನ ಚಾಳಿ. daily bathing is a good habit ದಿನಾ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸ.
  2. ಮನಃ ಪ್ರಕೃತಿ; ಮನಸ್ಸಿನ – ಪ್ರವೃತ್ತಿ, ಸ್ವಭಾವ: habit of mind ಮನಸ್ಸಿನ ಸ್ವಭಾವ.
  3. ದೇಹಪ್ರಕೃತಿ: a man of corpulent habit ಸ್ಥೂಲ ದೇಹಪ್ರಕೃತಿಯವನು.
  4. (ಸಸ್ಯವಿಜ್ಞಾನ, ಜೀವವಿಜ್ಞಾನ) ಬೆಳೆಯುವ ಸ್ವಭಾವ ರೀತಿ: a grass ubiquitous in its habit ಎಲ್ಲೆಲ್ಲೂ ಬೆಳೆಯುವ ಸ್ವಭಾವದ ಹುಲ್ಲು.
  5. (ಮುಖ್ಯವಾಗಿ ದಾರ್ಮಿಕ ಪಂಥಕ್ಕೆ ಸಂಬಂಧಿಸಿದ) ಪೋಷಾಕು.
  6. ಸ್ತ್ರೀಯ ಕುದುರೆ ಸವಾರಿಯ ಪೋಷಾಕು.
  7. (ಪ್ರಾಚೀನ ಪ್ರಯೋಗ) ಉಡುಪು.
  8. (ಮನಶ್ಶಾಸ್ತ್ರ) ಅನೈಚಿಕ ಪ್ರತಿಕ್ರಿಯೆ; ಅಪ್ರಾಜ್ಞಿಕ ಪ್ರತಿಕ್ರಿಯೆ; ನಿರ್ದಿಷ್ಟ ಸಂದರ್ಭವೊಂದಕ್ಕೆ ತನ್ನಷ್ಟಕ್ಕೆ ತಾನೆ ಒದಗುವ, ಪ್ರಜ್ಞಾಪೂರ್ವಕವಾಗಿ ಆಗಿರದ ಪ್ರತಿಕ್ರಿಯೆ.
  9. (ಆಡುಮಾತು) ದುರಭ್ಯಾಸ; ಕೆಟ್ಟ ಚಾಳಿ, ಉದಾಹರಣೆಗೆ ಮಾದಕವಸ್ತುಗಳನ್ನು ತಿನ್ನುವ ಯಾ ಕುಡಿಯುವ ಅಭ್ಯಾಸ, ಚಾಳಿ.
ಪದಗುಚ್ಛ
  1. creature of habit ಅಭ್ಯಾಸಜೀವಿ; ಯಾವನ ಇಡೀ ನಡವಳಿಕೆಯು ರೂಢಿಯ ಬಲದಿಂದಲೇ ನಡೆಯುವುದೋ ಅಂಥವನು.
  2. from habit, or from force of habit, or out of habit ಅಭ್ಯಾಸಬಲದಿಂದ; ರೂಢಿಯಿಂದ.
ನುಡಿಗಟ್ಟು
  1. get out of the habit of ಅಭ್ಯಾಸವನ್ನು ಬಿಡು; ನಿಯತವಾಗಿ ಮಾಡುವುದನ್ನು ಬಿಟ್ಟು ಬಿಡು; ಚಾಳಿ ತೊರೆ; ರೂಢಿಯಿಂದ ತಪ್ಪಿಸಿಕೊ.
  2. make a habit of (ಯಾವುದನ್ನೇ) ಅಭ್ಯಾಸವನ್ನಾಗಿ ಮಾಡಿಕೊ; ರೂಢಿಮಾಡಿಕೊ.
See also 1habit
2habit ಹ್ಯಾಬಿಟ್‍
ಸಕರ್ಮಕ ಕ್ರಿಯಾಪದ
  1. (ಸಾಮಾನ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ) ಉಡುಪು ತೊಡಿಸು; ಬಟ್ಟೆಹಾಕು.
  2. (ಪ್ರಾಚೀನ ಪ್ರಯೋಗ) ವಾಸಿಸು; ವಾಸಮಾಡು.