gyroscope ಜೈಅರಸ್ಕೋಪ್‍
ನಾಮವಾಚಕ

ಜೈರೋಸ್ಕೋಪು; ಭ್ರಮಣ ದರ್ಶಕ:

  1. ಗಿರಿಕಿ ಹೊಡೆಯುವ ಕಾಯಗಳ ಚಲನೆಯ ಲಕ್ಷಣಗಳನ್ನು ನಿದರ್ಶಿಸುವ ಉಪಕರಣ.
  2. ಗಿರಿಕಿ ಹೊಡೆಯುತ್ತಿರುವ ಚಕ್ರವೊಂದರ ಅಕ್ಷವು ಸಲೀಸಾಗಿ ದಿಕ್ಕು ಬದಲಿಸುವಂತಿದ್ದು, ಅದನ್ನು ಹೊತ್ತಿರುವ ಕಾಯವು ಯಾವ ಕಡೆಗೆ ತಿರುಗಿಕೊಂಡರೂ ತಾನು ಮಾತ್ರ ಸದಾ ಒಂದೇ ದಿಕ್ಕಿಗೆ ತಿರುಗಿಕೊಂಡಿರುವಂತೆ ಏರ್ಪಾಟು ಮಾಡಿರುವ ಒಂದು ಉಪಕರಣ. Figure: gyroscope