gypsy ಜಿಪ್ಸಿ
ನಾಮವಾಚಕ
  1. ಜಿಪ್ಸಿ; ಕೊರವ; ‘ರೋಮನಿ’ ಎಂದು ಕರೆದುಕೊಳ್ಳುವ, ಭಾರತದ ನೆಲೆಯವರಾಗಿದ್ದ, ಅಶುದ್ಧ ಹಿಂದೀ ಭಾಷೆಯನ್ನಾಡುವ, ಬುಟ್ಟಿ ಹೆಣಿಗೆ, ಕುದುರೆ ವ್ಯಾಪಾರ, ಕಣಿ ಹೇಳುವುದು, ಮೊದಲಾದ ಜೀವನೋಪಾಯಗಳುಳ್ಳ, ಒಂದೆಡೆ ನಿಲ್ಲದೆ ಅಲೆಯುತ್ತಿರುವ, ಕಪ್ಪು ಒಡಲೂ ಕೂದಲೂ ಉಳ್ಳ, ಒಂದು ಜನಾಂಗದವನು.
  2. ಜಿಪ್ಸಿ; ಜಿಪ್ಸಿಗಳನ್ನು ಹೋಲುವವನು ಯಾ ಅವರಂತೆ ಜೀವನ ನಡೆಸುವವನು.
  3. (ತಮಾಷೆಯಾಗಿ) ತಂಟೆಕೋರಿ ಹೆಂಗಸು ಯಾ ಶ್ಯಾಮಲ ವರ್ಣದ ಹೆಂಗಸು.