gymnasium ಜಿಮ್ನೇಸಿಅಮ್‍, ಜಿಮ್ನೇಸ್ಯಮ್‍
ನಾಮವಾಚಕ
(ಬಹುವಚನ gymnasiums, gymnasia).
  1. ವ್ಯಾಯಾಮಶಾಲೆ; ಗರಡಿ(ಮನೆ); ಅಂಗಸಾಧನೆ ಗೃಹ; ತಾಲೀಮುಖಾನೆ.
  2. (ಉಚ್ಚಾರಣೆ ಜಿಮ್ನಾಸಿಉಮ್‍ ಸಹ.) ಉಚ್ಚಶಿಕ್ಷಣ ತರಬೇತಿ ಶಾಲೆ; (ಯೂರೋಪಿನಲ್ಲಿ, ಮುಖ್ಯವಾಗಿ ಜರ್ಮನಿಯಲ್ಲಿ) ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ತರಬೇತು ಮಾಡುವ ಮೇಲುದರ್ಜೆಯ ವಿದ್ಯಾಶಾಲೆ.