See also 2guy  3guy  4guy
1guy ಗೈ
ನಾಮವಾಚಕ

ಗೈ; ಬಿಗಿ – ಹಗ್ಗ, ಸರಪಣಿ, ಮೊದಲಾದವು; ಎತ್ತುಯಂತ್ರದ ಹೊರೆ ಮೊದಲಾದವನ್ನು ಓಲದಂತೆ ಸ್ತಿಮಿತಪಡಿಸುವ, ಯಾ ಡೇರೆ, ಕಂಬ, ಮೊದಲಾದವನ್ನು ಅದರ ಸ್ಥಳದಲ್ಲಿ ಭದ್ರವಾಗಿ ಕಟ್ಟಿ ನಿಲ್ಲಿಸುವ ಹಗ್ಗ, ಸರಪಣಿ, ಮೊದಲಾದವು.

See also 1guy  3guy  4guy
2guy ಗೈ
ಸಕರ್ಮಕ ಕ್ರಿಯಾಪದ

ಹಗ್ಗ, ಸರಪಣಿ, ಮೊದಲಾದವುಗಳಿಂದ ಕಟ್ಟು, ಬಿಗಿ, ಭದ್ರಪಡಿಸು.

See also 1guy  2guy  4guy
3guy ಗೈ
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಇಂಗ್ಲೆಂಡಿನಲ್ಲಿ ಪ್ರತಿ ನವೆಂಬರ್‍ 5ನೆಯ ತಾರೀಖು ಸುಡುವ) ಗೈಹಾಕ್ಸ್‍ ಎಂಬುವನ ಆಕೃತಿ, ಬೊಂಬೆ.
  2. (ಬ್ರಿಟಿಷ್‍ ಪ್ರಯೋಗ) ವಿಕಾರವೇಷಿ; ವಿಕಾರವಾದ ವೇಷ ಧರಿಸಿದ ಮನುಷ್ಯ.
  3. (ಅಶಿಷ್ಟ) ಆಳು; ಆಸಾಮಿ; ಗಿರಾಕಿ.
  4. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ತಲೆ ತಪ್ಪಿಸಿಕೊಂಡು) ಓಡಿ ಹೋಗುವುದು; ಪರಾರಿಯಾಗುವುದು; ಕಂಬಿ ಕೀಳುವುದು.
ನುಡಿಗಟ್ಟು
  1. do a guy ಕಣ್ಮರೆಯಾಗು; ಮಾಯವಾಗು.
  2. give the guy to ಪರಾರಿಯಾಗು; ಕಂಬಿಕೀಳು.
See also 1guy  2guy  3guy
4guy ಗೈ
ಸಕರ್ಮಕ ಕ್ರಿಯಾಪದ
  1. ಬೊಂಬೆ ಮಾಡಿ ಪ್ರದರ್ಶಿಸು; ಆಕೃತಿ ಮಾಡಿ ತೋರಿಸು; ಪ್ರತಿಕೃತಿಯಾಗಿ ಮಾಡಿ ಮೆರೆಯಿಸು.
  2. ಕುಚೋದ್ಯ, ಗೇಲಿ – ಮಾಡು.
ಅಕರ್ಮಕ ಕ್ರಿಯಾಪದ

(ಅಶಿಷ್ಟ) ಓಡಿಹೋಗು; ಪರಾರಿಯಾಗು.